ಎಚ್ ಬಿ ಮುರಾರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಮಡಿಕೆ ಬಾರಿಗೆ ಮೂಲಕ ಬಾರಿ ವಿನೂತನ ಪ್ರತಿಭಟನೆ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS
ಲಿಂಗಸುಗೂರ,ಏಪ್ರಿಲ್ 08 : ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲು ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ ಬಿ ಮುರಾರಿಗೆ ಟಿಕೆಟ್ ಹಂಚಿಕೆ ಮಾಡಬೇಕು ಎಂದು ಮಾದಿಗ ಸಾಮಾಜದ ಮುಖಂಡರು ಇಂದು ಪಟ್ಟಣದ ಚರ್ಚ ದಿಂದ ಬಸ್ ನಿಲ್ದಾಣದ ಸರ್ಕಲ್ ಬಳಿ ಬಂದು ಮಡಿಕೆ ಬಾರಿಗೆ ಮೂಲಕ ಬಾರಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು .
ಲಿಂಗಸುಗೂರ ಕ್ಷೇತ್ರದಲ್ಲಿ ಬಹು ಸಂಖ್ಯಾತ ರಾಗಿರುವ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಬೇಕು ಎಂಬುದು ಸಮುದಾಯದ ಮುಖಂಡರ ಆಗ್ರಹವಾಗಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆ ಯಾಗುವದಂತು ಖಂಡಿತ ಎಂದು ಮಾದಿಗ ಮುಖಂಡ ವಿಜಯ ಕುಮಾರ್ ಹಟ್ಟಿ ಇವರು ಕಾಂಗ್ರೆಸ್ ಪಕ್ಷದ ನಾಯಕರಿಗೆ ಒತ್ತಾಯಿಸಿದ್ದಾರೆ.
ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಕಡೆಗಣಿಸುತ್ತಾ ಬಂದಿದೆ ಇದರಿಂದ ತಾಲ್ಲೂಕಿನ ಮಾದಿಗ ಅನ್ಯಾಯ ಆಗುತ್ತಿದೆ ಇದನ್ನು ಸರಿಪಡಿಸಲು ಮಾದಿಗರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಮಾತ್ರ ಗೆಲುವು ಸಾಧ್ಯ ಎಂಬುದು ಮುಖಂಡರು ಅಭಿಮಾನಿಗಳು ಬೃಹತ್ ಮಡಿಕೆ ಬಾರಿಗೆ ಮೂಲಕ ಬಾರಿ ವಿನೂತನ ಪ್ರತಿಭಟನೆ ನಡೆಸಿದರು .
ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದು ಮೂಲ ಅಸ್ಪುಶ್ಯರಿಗೆ ಎಡಗೈ ಸಮುದಾಯಕ್ಕೆ ಟಿಕೆಟ್ ಹಂಚಿಕೆ ಮಾಡಬೇಕು ವಲಸೆ ರಾಜಕಾರಣಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಸೋಲು ಖಚಿತ ಎಂಬ ವಾತಾವರಣ ನಿರ್ಮಾಣವಾಗಿದೆ ಇದಕ್ಕೆಲ್ಲಾ ಕಾರಣ ಈಗಿರುವ ಶಾಸಕರ ವಿರುದ್ಧ ಅಪಸ್ವರ ಬಹಿರಂಗವಾಗಿ ಕೇಳಿಬರುತ್ತಿವೆ ಹಾಗೂ ಶಾಸಕ ಡಿ ಎಸ್ ಹೂಲಗೇರಿ ಇವರ ಲಂಚಾವತಾರ ವೈಫಲ್ಯವೇ ಎದ್ದು ಕಾಣುತ್ತದೆ ಕಾಂಗ್ರೆಸ್ ಪಕ್ಷವು ಇಂತಹ ನಾಯಕರಿಗೆ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆ ಮಾಡಬಾರದೆಂದು ಸಮುದಾಯದ ಮುಖಂಡರ ಆಗ್ರಹವಾಗಿದೆ.
ಈ ಸಂದರ್ಭದಲ್ಲಿ ನಾಗರಾಜ್ ತಿಪ್ಪಣ್ಣ ಜೆ ಬಾಬು ಹಟ್ಟಿ ಸಂದೀಪ್ ಮುರಾರಿ ಪಂಪಾಪತಿ ಪರಂಗಿ ವಕೀಲರು ಪ್ರದೀಪ್ ಮುತ್ತು ಅನಿಲ್ ಸೇರಿದಂತೆ ಇತರರು ನೂರಾರು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

Post a Comment

Previous Post Next Post