UDAYAVANI NEWS
ನಾರಾಯಣಪುರ,ಏಪ್ರಿಲ್ 07 : ಪಟ್ಟಣದ ಮಾತೋಶ್ರೀ ನಿಂಬೆಮ್ಮ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ, ಬಸವಾದಿ ಪ್ರಮಥ ಶಿವಶರಣರಾದ ಶ್ರೀ ಅಕ್ಕಮಹಾದೇವಿಯವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ವಿಜಯಕುಮಾರ ಗುತ್ತೇದಾರ ಅವರು ಈ ಸಮಾರಂಭದಲ್ಲಿ ಮಾತನಾಡುತ್ತಾ," 12 ನೇ ಶತಮಾನದಲ್ಲಿ #ಮಹಾತ್ಮ_ಜಗಜ್ಯೋತಿ_ಬಸವಣ್ಣನವರು ಮತ್ತು #ಬಸವಾದಿ_ಪ್ರಮಥ_ಶಿವಶರಣರು ಕಟ್ಟಿದ #ಶೂನ್ಯ_ಸಿಂಹಾಸನ #ಶೂನ್ಯ_ಪೀಠದ #ಅನುಭವ_ಮಂಟಪದಲ್ಲಿ ಬಂದು ವಚನ ಸಾಹಿತ್ಯ ರಚನೆ ಮಾಡುವ ಮೂಲಕ ಸಮಾಜದ ಅಂಕು ಡೊಂಕು ತಿದ್ದುವ ಕಾಯಕ ಮಾಡಿದವರು, ಚನ್ನಮಲ್ಲಿಕಾರ್ಜುನಯ್ಯರನ್ನು ತಮ್ಮ ಆರಾಧ್ಯ ದೈವವನ್ನಾಗಿ ಸ್ವೀಕರಿಸಿ ಅದನ್ನೇ ವಚನಗಳ ಅಂಕಿತ ನಾಮವನ್ನಾಗಿ ಇಟ್ಟುಕೊಂಡು ವಚನ ಸಾಹಿತ್ಯ ರಚಿಸಿದ್ದಾರೆ.
ಅಕ್ಕ ಬರೆದ ಅಂತಃಕರಣದ ವಚನಗಳು ಸಾರ್ವತ್ರಿಕ ಸತ್ಯವಾಗಿವೆ. ಅವರ ವಚನಗಳು ಅಮೃತ. ಅವರ ವಚನಗಳು ಯುವಕರಿಗೆ ದಾರಿ ದೀಪ. ಅವರ ವಚನಗಳಲ್ಲಿ ಜ್ಞಾನದ ಶಕ್ತಿ , ಸಾಮರ್ಥ್ಯ ಮತ್ತು ಸಂಸ್ಕೃತಿ ಎಲ್ಲವೂ ಅಡಗಿದೆ. ಅವರ ವಚನಗಳನ್ನ ನಮ್ಮ ಮಕ್ಕಳು ಪ್ರತಿದಿನ ಕಂಠಪಾಠ ಮಾಡಿ ಅವುಗಳನ್ನ ಅನುಸರಿಸಿದರೆ ಅವರ ಬಾಳು ಬೆಳಕಾಗುವುದು. ಅವರ ಬದುಕು ಹಸನಾಗುವುದು. ತಂದೆ ತಾಯಿಗಳು ಮಕ್ಕಳಿಗೆ ದಾರಿ ವಚನದ ದಾರಿ ತೋರಿಸಿ ಪ್ರತಿದಿನವೂ ವಚನ ಕಂಠ ಪಾಠ ಮಾಡುವ ರೂಢಿ ಹಾಕಿಕೊಂಡರೆ ಅವರ ಬದುಕು ಬಂಗಾರವಾದೀತು ಅಂತಹ ಅಕ್ಕನನ್ನು ಪಡೆದ ನಮ್ಮ ನಾಡು ಧನ್ಯ." ಎಂದು ಉಪ ಪ್ರಾಚಾರ್ಯರು ನುಡಿದರು
ಹಿಂದೆ ಎಲ್ಲಾ ಗ್ರಾಮಗಳಲ್ಲಿ ಕೂಡ ಅಕ್ಕನ ಬಳಗ ಎಂಬ ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಿ ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸಹಕಾರಿ ಆಗಿತ್ತು. ಆದರೆ ಇಂದು ಅಕ್ಕನ ಬಳಗ ಮಾಯವಾಗುತ್ತಿವೆ. ಅದನ್ನು ಅಭಿವೃದ್ಧಿಪಡಿಸುವ ಕಾರ್ಯ ನಮ್ಮದಾಗಬೇಕು ಎಂದು ಕಾಲೇಜಿನ ಉಪನ್ಯಾಸಕರಾದ ಶ್ರೀ ಶೇಖರಯ್ಯ ಹಿರೇಮಠ ನುಡಿದರು.
Tags
ಜಿಲ್ಲಾ ಸುದ್ದಿಗಳು