ಮರಳಿ ಕಾಂಗ್ರೇಸ್ ಗೂಡು ಸೇರಿದ ಬಂಜಾರಾ ಸಮಾಜದ ಮುಖಂಡರು




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಕಲಬುರ್ಗಿ, ಏಪ್ರಿಲ್ 07 : ಕೆಲವು ದಿನಗಳ ಹಿಂದಷ್ಟೆ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ ಬಂಜಾರಾ ಸಮಾಜದ ತಾಲೂಕಾಧ್ಯಕ್ಷ ರಾಮಶೆಟ್ಟಿ ಪವಾರ ಹಾಗೂ ಬಾಬು ಪವಾರ ಮತ್ತೆ ಕಾಂಗ್ರೇಸ್ ಗೂಡು ಸೇರಿ ಅಚ್ಚರಿ ಮೂಡಿಸಿದರು.

ಕಲಬುರ್ಗಿ ನಗರದ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರ ಸಮ್ಮುಖದಲ್ಲಿ ರಾಮಶೆಟ್ಟಿ ಪವಾರ ಬಾಬು ಪವಾರ ಕಾಶಿನಾಥ ಪಾಟೀಲ ರಾಜಶೇಖರ ಚಿಮ್ಮಾ ಲಕ್ಷ್ಮಣ ಜಾಧವ ಸುಭಾಶ ರಾಠೋಡ ಗೋಟೂರ ಯುವರಾಜ ಕಾರಬಾರಿ ಬಾಬು ರಾಠೋಡ ರಮೇಶ ದೇಸಾಯಿ ಸೇರಿದಂತೆ ಇತರರು ಕೈ ಬಾವುಟ ಹಿಡಿದು ಕಾಂಗ್ರೇಸ್ ಪಕ್ಷಕ್ಕೆ ಜೈ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಬಾಬುರಾವ ಪಾಟೀಲ ರಾಜಗೋಪಾಲ ರೆಡ್ಡಿ ಮೇಘರಾಜ ರಾಠೋಡ ಮಲ್ಲಿಕಾರ್ಜುನ ಪಾಟೀಲ ಹುಳಗೇರಾ ವೀರಸಂಗಪ್ಪ ಪಾಟೀಲ ಬಸವರಾಜ ಪ್ಯಾಟಿ ಶರಣು ಮೋತಕಪಳ್ಳಿ ಮಲ್ಲು ಸಾಹುಕಾರ ಗುರು ಪಡಶೆಟ್ಟಿ ಡಾಃತುಕಾರಾಮ ಪವಾರ ಪ್ರವೀಣ ಟಿ.ಟಿ ಶಾಮ ರಾಠೋಡ ಹೀರಾಸಿಂಗ್ ಜಾಧವ ಕಾಶಿನಾಥ ಕಂದಗೂಳ ಮಹೇಶ ಗುತ್ತೇದಾರ ಸಿದ್ದು ಪೂಜಾರಿ ಸಂಜು ಪೂಜಾರಿ ನಾಮದೇವ ನಾಯಕ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Post a Comment

Previous Post Next Post