UDAYAVANI NEWS
ಲಿಂಗಸುಗೂರ, ಮಾರ್ಚ್ 24 : ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಡಾ. ಅಮರೇಶ ಪಾಟೀಲ್ ತಾಲೂಕ ಆರೋಗ್ಶ ಅಧಿಕಾರಿಗಳು ಹಾಗೂ ಡಾ. ಖಾಜಾ ಮೋಹಿನುದ್ದಿನ್ ತಜ್ಞ ವೈದ್ಶರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷಯರೋಗದ ಕುರಿತು ಡಾ: ಅಮರೇಶ್ ಪಾಟೀಲ್ ಮಾತನಾಡಿದ ,ಕ್ಷಯ ನಿರ್ಮೂಲನೆಗೆ ಎಲ್ಲ ನಾಗರಿಕರ ಸಹಕಾರವನ್ನು ಕೋರಿದರು.ಎರಡು ವಾರ ಮೇಲ್ಪಟ್ಟು ಇರುವ ಕೆಮ್ಮು. ಮೇಲಿಂದ ಮೇಲೆ ಕಂಡು ಬರುವ ಜ್ವರ. ಕೆಮ್ಮಿನಲ್ಲಿ ಕಫ. ಆಗಾಗ್ಗೆ ಕಫದಲ್ಲಿ ರಕ್ತ ಕಾಣುವುದು. ಹಸಿವಾಗದಿರುವುದು. ತೂಕ ಕಡಿಮೆ ಯಾಗುವುದು.ಮುಂತಾದ ಸಾಮಾನ್ಯ ಲಕ್ಷಣ ಇದ್ದರೆ ಸಮೀಪದ ಸರಕಾರಿ ಆಸ್ಪತ್ರೆ ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಬೇಕು. ಆಶಾಕಾರ್ಯಕರ್ತರನ್ನು ಸಂಪರ್ಕಿಸಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಲು ತಿಳಿಸಿದರು. ಈ ವರ್ಷದ ಘೋಷಣೆ ಹೌದು ನಾವು ಕ್ಷಯರೋಗವನ್ನು ಕೊನೆಗಳಿಸಬಹುದು ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ . ಶ್ರೀ ಅಲ್ಲಮ ಪ್ರಭು ಪ್ಶಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಇಲಾಖೆಯ ಬಸವರಾಜ ಸುರಪುರ.ಮಂಜುನಾಥ್. ಸುರೇಶ್. ಸಿಧ್ಧಲಿಂಗಪ್ಪ . ತಿರುಪತಿ.ಪ್ರತಾಪ್. ಕಮಲ್. ಶೇಕ್ಷಾವಲಿ.ಶರಣಬಸವ.ಪರಶುರಾಮ್. ಸತೀಶ್. ಪದ್ಮಾವತಿ ನಾಯಕ್. ಅಂಬಮ್ಮ. ನಾಗರತ್ನ. ವಸೀಂರೆಹಮಾನ್. ಇತರರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು