ರಂಗು ರಂಗಿನ ಹೋಳಿ ಹಬ್ಬ ಕಾರ್ಯಕ್ರಮಕ್ಕೆ ಶ್ರೀಗಳಿಂದ ಚಾಲನೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಮಾರ್ಚ್ 24 : ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಏರ್ಪಡಿಸಲಾಗಿದ್ದ ರಂಗು ರಂಗಿನ ಹೋಳಿ ಹಬ್ಬದ ಕಾರ್ಯಕ್ರಮಕ್ಕೆ ಶ್ರೀ ಶ್ರೀ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. 

ಹೋಳಿ ಹಬ್ಬದ ಪ್ರಯುಕ್ತ ಬಜರಂಗದಳ ತಾಲೂಕ ಸಂಯೋಜಕ ರಾಕೇಶ್ ಪಾಟೀಲರ ಮುಂದಾಳತ್ವದಲ್ಲಿ ಪಟ್ಟಣದಲ್ಲಿ ಗುರುವಾರ ರಂಗು ರಂಗಿನ ಬಣ್ಣವನ್ನು ವಿವಿಧ ನಗರಗಳಲ್ಲಿ ಯುವಕರ ದಂಡೆ ಮನೆ ಮನೆಗೆ ತೆರಳಿ ಸಂತೋಷ ಸಡಗರದಿಂದ ಒಬ್ಬರಿಗೊಬ್ಬರು ಬಣ್ಣವನ್ನು ಚಿಮ್ಮಿಸಿ, ಮುಖಕ್ಕೆ ವಿವಿಧ ಬಗೆಯ ಹಾಗೂ ತಲೆಗೆ ಮೊಟ್ಟೆಯನ್ನು ಹೊಡೆದುಕೊಳ್ಳುವ ಮೂಲಕ ಹೋಳಿಯನ್ನು ಸಂತಸದಿಂದ ಆಡಿದರು. ಮತ್ತೊಂದು ಯುವ ತಂಡವು ಗಾಂಧಿನಗರದ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಪಟ್ಟಣದ ಮುದಗಲ್ ಕ್ರಾಸ್, ಅಗಸಿ, ಕಲೀಲ್ ಸರ್ಕಲ್, ದೈವದಕಟ್ಟೆ, ಕನಕ ಸರ್ಕಲ್ ಮುಖಾಂತರ ಬಸ್ ಸ್ಟ್ಯಾಂಡ್ ನಲ್ಲಿ ಮುಕ್ತಾಯಗೊಂಡಿತು.


ಇದೇ ಸಂದರ್ಭದಲ್ಲಿ
ನಗರ ಸಂಚಾಲಕ ಹುಸೇನಪ್ಪ ಬಾರಕೇರ್ ಅಕ್ಷಯ್ ಮುಂದಲಮನಿ ರವಿ ಮಟ್ಟೂರ್ ಸಂತೋಷ್ ಪಾಟೀಲ್ ಅಮರ್ ನಾಗಲಿಕರ್ ಅಮರೇಶ್ ನಾಯಕ್ ಸುಮಂತ್ ಮಾನ್ವಿ ಮಣಿ ಸಜ್ಜನ್ ಇನ್ನು ಮುಂತಾದ ನೂರಾರು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.


Post a Comment

Previous Post Next Post