UDAYAVANI NEWS
ಲಿಂಗಸುಗೂರ, ಮಾರ್ಚ್ 24 : ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖಂಡ ಶಿವಪುತ್ರ ಗಾಣದಾಳ ಲಿಂಗಸುಗೂರ ಪಟ್ಟಣದಲ್ಲಿ ಮಾರ್ಚ್ 26 ರಂದು ಆಮ್ ಆದ್ಮಿ.ಪಕ್ಷದ ಸಭೆಯನ್ನು ಏರ್ಪಡಿಸಿದ್ದು ಆದ್ದರಿಂದ ಅಪ್.ಪಕ್ಷದ
ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ. ರಾಜ್ಯ ಪ್ರಚಾರ ಹಾಗೂ ಜನಸಂಪರ್ಕ ಘಟಕದ ಅಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಮತ್ತು ಖ್ಯಾತ ಚಲನಚಿತ್ರ ಹಾಸ್ಯೆ ನಟರು. ಟೆನಿಸ್ ಕೃಷ್ಣ ಹಾಗೂ ರಾಜ್ಯ ಉಪದ್ಯಾಕ್ಷರಾದ ವಿಜಯ ಶರ್ಮ ಅವರು 26 ಮಾರ್ಚ ರಂದು ಲಿಂಗುಗೂರು ಪಟ್ಟಣದಲ್ಲಿ ಆಪ್ ಪಕ್ಷದ ಸಭೆಗೆ ಬರುತ್ತಿದ್ದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾದ ಹಿನ್ನೆಲೆಯಲ್ಲಿ ಬಾನುವಾರದಂದು ಪ್ರಪಥಮವಾಗಿ ಲಿಂಗಸುಗೂರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಅರವಿಂದ ಕ್ರೇಜಿ ವಾಲರವರ ಕ್ರಾಂತಿಕಾರಿ ಯೋಜನೆಗಳು ಹಾಗೂ ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತದ ಮೂಲಕ ಇಡೀ ದೇಶಕ್ಕೆ ಮನೆ ಮಾತಾಗಿರುವ ಕ್ರೇಜಿವಾಲ ತತ್ವ ಸಿದ್ಧಾಂತಗಳನ್ನು ಜನರಲ್ಲಿ ಜಾಗೃತಿ ಮೂಡಿಸುವ ಮುಖಾಂತರ ಆಮ್ ಆದ್ಮಿ. ಪಕ್ಷದ ಅಭ್ಯರ್ಥಿಯ ಕೈ ಬಲಗೊಳಿಸಲು ಲಿಂಗಸುಗೂರು ಕ್ಷೇತ್ರದ ಜನತೆ ಅಪ್ ಪಕ್ಷದ ಸಭೆಗೆ ಆಗಮಿಸಲು ಶಿವಪುತ್ರ ಗಾಣದಾಳ ಸುದ್ದಿಗೊಷ್ಟಿ ಮುಖಾಂತರ ಮಾತನಾಡಿದರು. ಈ ಸಂದರ್ಭದಲ್ಲಿ
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರ ಶಿವಪುತ್ರ ಗಾಣದಾಳ
ಆಮ್, ಆದ್ಮಿ ಪಕ್ಷದ ಮುಖಂಡರು
ಮಂಜುನಾಥ
ದೇವೇಂದ್ರಪ್ಪ ಮಾಳೆ ಜಾಪರಸಾಬ ಮಹಾಬಲೇಶ್ವರ ರೆಡ್ಡಿ. ರಂಗಪ್ಪ ಭೋವಿ ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು