UDAYAVANI NEWS
ಮಸ್ಕಿ, ಮಾರ್ಚ್ 14 : ಪಟ್ಟಣದ ಬಯಲು ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ಕಿಡಿಗೇಡಿಗಳು ಗುಡ್ಡ ಕ್ಕೆ ಬೆಂಕಿಯನ್ನು ಹಚ್ಚಿದಾರೆ. ಇದನ್ನು ಕಂಡು ಪ್ರಕೃತಿ ಫೌಂಡೇಶನ್ ಅಧ್ಯಕ್ಷ ಶಿವ ಮೂರ್ತಿ ಯವರು ಮತ್ತು ಸಂಘಟನೆ ಸದ್ಯಸರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.
ಈ ವೇಳೆ,ಪ್ರಕೃತಿ ಫೌಂಡೇಶನ್ ಅಧ್ಯಕ್ಷ ಶಿವ ಮೂರ್ತಿ ರವರು ಮಾತನಾಡಿ.
ಗುಡ್ಡದ ಪಕ್ಕದಲ್ಲಿ ಸಿಗರೆಟ್ ಸೇದಿ ಅದನ್ನು ಹಾರಿಸದೆ ಎಸೆದಿರುವ ಪರಿಣಾಮವಾಗಿ ಗುಡ್ಡದ ಪಕ್ಕದಲ್ಲಿ ಅನೇಕ
ಸಸಿಗಳು ಸುಟ್ಟುಹೋಗಿವೆ. ಪ್ರಕೃತಿ ಫೌಂಡೇಶನ್ (ರಿ) ಬೆಂಕಿಯನ್ನು ನಂದಿಸಿ ಮುಂದಾಗುವ ಅಪಾಯವನ್ನು ತಪ್ಪಿಸಿ ಸಸಿ ಮರ ಪ್ರಾಣಿಗಳನ್ನು ಉಳಿಸುವ ಪ್ರಯತ್ನ ಮಾಡಿ ಪ್ರಕೃತಿಯನ್ನು ಸಂರಕ್ಷಿಸಿದೆ.
ಸಿಗರೆಟ್ ಸೇದುವ ಅಣ್ಣ ತಮ್ಮಂದಿರೇ
ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಬೀಡಿ, ಸಿಗರೇಟ್ ಸೇದುವವರು ಕಡ್ಡಿ ಹಾಗೂ ಬಿಡಿ ಸಿಗರೇಟ್ ನಂದಿಸಿ ಇಲ್ಲದಿದ್ದರೆ ನಿಮ್ಮ ನಿರ್ಲಕ್ಷದಿಂದ ಕಾಡು ಬೆಟ್ಟ ಗುಡ್ಡ ಗಿಡಮರ ಪ್ರಾಣಿಗಳು ನಾಶವಾಗುತ್ತವೆ ಪ್ರಕೃತಿ ನಮ್ಮ ಉಸಿರು ಪ್ರಕೃತಿ ನಾಶವಾದರೆ ಪ್ರಾಣಿ ಪಕ್ಷಿ ಸಂಕುಲ ಮನುಕುಲ ಯಾವುದೂ ಕೂಡ ಈ ಭೂಮಿ ಮೇಲೆ ಜೀವಂತ ಇರುವುದಕ್ಕೆ ಸಾಧ್ಯವಿಲ್ಲ ದಯವಿಟ್ಟು ಎಚ್ಚೆತ್ತುಕೊಳ್ಳಿ. ಎಂದು
ಪ್ರಕೃತಿ ಫೌಂಡೇಶನ್ (ರಿ) ಗ್ರೀನ್ ಆರ್ಮಿಯು ಪತ್ರಿಕೆಯ ಮೂಲಕ ಮನವಿಯನ್ನು ಮಾಡಿದೆ.
Tags
ಜಿಲ್ಲಾ ಸುದ್ದಿಗಳು