ಸಾಂಸ್ಕೃತಿಕ ಉತ್ಸವ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಮಾರ್ಚ್ 14 : ದಿವ್ಯ ಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಟ್ರಸ್ಟಿನ ವಾರ್ಷಿಕೋತ್ಸವ, ಸಾಂಸ್ಕೃತಿಕ ಉತ್ಸವ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು : ಮಾರ್ಚ್ 15 ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ. ಸಿ. ರಸ್ತೆ, ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ಗೀತೆ, ಸುಗಮ ಸಂಗೀತ, ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಿಗೆ ತಲುಪುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು. ಟ್ರಸ್ಟಿನ ವಿಶೇಷ ಸಂಚಿಕೆ ಮತ್ತು ಸಾಹಿತ್ಯ, ಕಲೆ, ನಾಟಕ, ಸಿನಿಮಾ ರಂಗ ಈ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ನೀಡಿ ಗೌರವಿಸಲಾಗುವುದು. ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಸಂಜಯಕುಮಾರ ಸ್ವಾಮೀಜಿಯವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಶ್ರೀ ಎಂ. ಕೃಷ್ಣಪ್ಪ, ಮಾನ್ಯ ಶಾಸಕರು, ಅಧ್ಯಕ್ಷತೆಯನ್ನು ಶ್ರೀ ಜಾಣಗೆರೆ ವೆಂಕಟರಾಮಯ್ಯ, ಸಾಹಿತಿಗಳು ಹಾಗೂ ಪತ್ರಕರ್ತರು, ಪ್ರಶಸ್ತಿ ಪ್ರಧಾನ ಮಾಡಲು : ಡಾ: ಗೋಪಾಲಕೃಷ್ಣ ಶರ್ಮ, ಜ್ಯೋತಿಷ್ಯ ಬ್ರಹ್ಮ, ಸ್ಟಾರ್ ಸುವರ್ಣ ಖ್ಯಾತಿ, ಟ್ರಸ್ಟಿನ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆಯನ್ನು ಮಾಡುವವರು ಡಾ: ಬಿ.ಆರ್. ಹಿರೇಮಠ, ಅಬಕಾರಿ ಉಪ ಆಯುಕ್ತರು, ಬೆಂಗಳೂರು, ಅತ್ಯತ್ತಮ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಶ್ರೀ ಪಿ.ಎಸ್. ಕಾಂತರಾಜ್, ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರಿಗೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಸಮಾಜ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು, ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ.

Post a Comment

Previous Post Next Post