UDAYAVANI NEWS
ಮಸ್ಕಿ, ಮಾರ್ಚ್ 14 : ಪಟ್ಟಣದ ಮಸ್ಕಿ - ಲಿಂಗಸ್ಗೂರು ಮುಖ್ಯ ರಸ್ತೆಯ ಸೇತುವೆಯ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಯಲ್ಲಪ್ಪ (70 ) ಎಂಬ ವೃದ್ಧನ ಶವ ಪತ್ತೆ.ಮಸ್ಕಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
ಪಟ್ಟಣದ ಯಲ್ಲಪ್ಪ (70 ) ಎಂಬ ವ್ಯಕ್ತಿಯು ತನ್ನ ಹೆಂಡತಿ ಮಕ್ಕಳೊಂದಿಗೆ ಸಂತೋಷವಾಗಿದ್ದರು.ಸುಮಾರು ಐದು ಆರು ವರ್ಷಗಳಿಂದ ಕೆಮ್ಮು ದಮ್ಮು ಕಾಣಿಸಿಕೊಂಡಿತ್ತು ಮತ್ತು ಇತ್ತೀಚೆಗೆ ಹೊಟ್ಟೆ ನೋವು ಕೂಡ ಕಾಣಿಸಿಕೊಂಡಿದ್ದು, ಮುದುಗಲ್ ಮತ್ತು ಸಿಂಧನೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಕಡಿಮೆ ಯಾಗಿರಲಿಲ್ಲ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ನನ್ನ ಮಕ್ಕಳು ಏಷ್ಟು ತೋರಿಸಿದರು ನನಗೆ ಕೆಮ್ಮು ದಮ್ಮು ಕಡಿಮೆ ಆಗುತ್ತಿಲ್ಲ ಎಂದು ಬಹಳ ಮರುಗುತ್ತಾ ಜೀವನದಲ್ಲಿ ಜಿಗುಪ್ಸೆಗೊಂಡಂತಾಗಿ ನಾನು ಇದ್ದರೆಷ್ಟು ಬಿಟ್ಟರೆಷ್ಟು ಎಂದು ತನ್ನಷ್ಟಕ್ಕೇ ತಾನೇ ಮಾತನಾಡಿಕೊಳ್ಳುತ್ತಾ ಮಾನಸಿಕವಾಗಿ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಇದ್ದರಿಂದ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ 11-03-2023 ರ ರಾತ್ರಿ 9-30 ರ ನಂತರ ದಿನಾಂಕ 12-03-2023 ರ ಬೆಳಗ್ಗೆ 6-00 ಗಂಟೆಯ ವೇಳೆಯಲ್ಲಿ ಮಸ್ಕಿ ಲಿಂಗಸ್ಗೂರು ಮುಖ್ಯ ರಸ್ತೆಯ ಮಸ್ಕಿ ಸೇತುವೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾವುದೇ ಅನುಮಾನ ಹಾಗೂ ಯಾವುದೇ ರೀತಿಯ ದೂರು ಇರುವುದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ನೀಡಿದ ದೂರಿನ ಮೇಲೆ ಯು ಡಿ ಆರ್ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಮಸ್ಕಿ ಪೊಲೀಸ್ ಠಾಣೆಯ ಮೂಲಗಳು ಪತ್ರಿಕೆಗೆ ತಿಳಿಸಿವೆ.
Tags
ಜಿಲ್ಲಾ ಸುದ್ದಿಗಳು