ಪ್ರತಾಪ್ ಗೌಡ ಪಾಟೀಲ್ ಪರ ಸುಪುತ್ರ ಕರ ಪತ್ರ ಹಾಗೂ ಸ್ಟಿಕರ್ ಅಂಟಿಸುವ ಮೂಲಕ ಪ್ರಚಾರ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಮಾರ್ಚ್ 21 : ಪಟ್ಟಣದ ವಾರ್ಡ್ ನಂಬರ್ 17ರಲ್ಲಿ ವಿನಾಯಕ್ ಪಾಟೀಲ್ ಇವರು ಮತದಾರರ ಮನೆ ಮನೆಗೆ ತೆರಳಿ ಕರ ಪತ್ರ ನೀಡಿ ಹಾಗೂ ಮನೆಗಳಿಗೆ, ವಾಹನಗಳಿಗೆ ಬಿಜೆಪಿ ಸ್ಟಿಕರ್ ಅಂಟಿಸಿದರು.

ಕ್ಷೇತ್ರದ ಪ್ರಬಲ ಪ್ರತಾಪ್ ಗೌಡ ಪಾಟೀಲ್ ಇವರ ಪರವಾಗಿ ಅವರ ಹಿರಿಯ ಸುಪುತ್ರರಾದ ವಿನಾಯಕ್ ಪಾಟೀಲ್ ಇವರು ಮತದಾರರ ಮನೆ ಮನೆಗೆ ತೆರಳಿ ಕರ ಪತ್ರ ನೀಡಿ ಹಾಗೂ ಮನೆಗಳಿಗೆ, ವಾಹನಗಳಿಗೆ ಬಿಜೆಪಿ ಸ್ಟಿಕರ್ ಅಂಟಿಸುವ ಮೂಲಕ ಸೋಮವಾರ ಪ್ರಚಾರವನ್ನು ಮಾಡಿದರು.


ಇದೇ ಸಂದರ್ಭದಲ್ಲಿ 

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ, ಮಸ್ಕಿಮಾಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ ಯಂಬಲದ, ಡಾಕ್ಟರ್ ಪಂಚಾಕ್ಷರಯ್ಯ ಸ್ವಾಮಿ ಕಂಬಾಳಿ ಮಠ, ಶಕ್ತಿ ಕೇಂದ್ರ ಪ್ರಮುಖರಾದ ಅಭಿಜಿತ್ ಮಾಲಿ ಪಾಟೀಲ್, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ, ಮಲ್ಲಯ್ಯ ಅಂಬಾಡಿ, ವಾರ್ಡಿನ ಹಿರಿಯರಾದ ಮಳ್ಳಪ್ಪ ಪೂಜಾರಿ, ಮಲ್ಲಯ್ಯ ಆಲ್ದಾಳ, ರಾಮಣ್ಣ ಭೌತರು, ಬಸವರಾಜ್ ಬುಕ್ಕಣ್ಣ, ರರಾಯಪ್ಪ, ಯರ್ರಿ ಸ್ವಾಮಿ ಅಂಗಡಿ, ಶರಣೆಗೌಡ ಪೊಲೀಸ್ ಪಾಟೀಲ್, ಆಂಜನೇಯ ಆನೆ ಹೊಸೂರು, ಮಂಜುನಾಥ್ ಭೋವಿ, ಪಕ್ಷದ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

Post a Comment

Previous Post Next Post