ರಾಜ್ಯದ 7 ಹೊಸ ವಿವಿಗೆ ನೂತನ ಕುಲಪತಿಗಳ ನೇಮಕ : ಸರಕಾರ ಆದೇಶ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಮಾರ್ಚ್ 20 : ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿದೆ. ಸೋಮವಾರವೇ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೇ ತಿಳಿಸಿದ್ದಾರೆ.

ಡಾ. ಬಿ.ಕೆ ರವಿ - ಕೊಪ್ಪಳ ವಿಶ್ವವಿದ್ಯಾಲಯ ನೂತನ ಕುಲಪತಿ
ಅಶೋಕ್ ಸಂಗಪ್ಪ ಆಲೂರು - ಕೊಡಗು ವಿ ವಿ ಕುಲಪತಿ
ಡಾ.ಎಂ.ಆರ್ ಗಂಗಾಧರ್ - ಚಾಮರಾಜನಗರ ವಿ.ವಿ. ಕುಲಪತಿ
ಡಾ.ಆನಂದ್ ಶರದ್ - ಬಾಗಲಕೋಟೆ ವಿವಿ ಕುಲಪತಿ
ಡಾ.ಬಿ.ಎಸ್ ಬಿರಾದಾರ - ಬೀದರ್ ವಿ.ವಿ. ಕುಲಪತಿ
ಡಾ.ಸುರೇಶ್ ಎಚ್ ಜಂಗಮಶೆಟ್ಟಿ - ಹಾವೇರಿ ವಿ.ವಿ. ಕುಲಪತಿ
ಡಾ.ಟಿ.ಸಿ.ತಾರಾನಾಥ - ಹಾಸನ ವಿ.ವಿ. ಕುಲಪತಿ
ಸರ್ಕಾರವು ಜಿಲ್ಲೆಗೆ ಒಂದಾದರೂ ವಿಶ್ವವಿದ್ಯಾಲಯ ಇರಬೇಕು ಎನ್ನುವ ತತ್ವದಡಿಯಲ್ಲಿ ಈ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Post a Comment

Previous Post Next Post