ಸ್ವಂತ ಖರ್ಚಿಗೆ ನೀಡಿದ್ದ ಹಣ ಕೂಡಿಟ್ಟು ಶಾಸಕರಿಗೆ ದೇಣಿಗೆ ನೀಡಿ ಶುಭ ಹಾರೈಸಿದ ಪುಟ್ಟ ಪೋರಿಅಕ್ಷತಾ ಕೆಳಗಿನಮನೆ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 21 : ತಾಲೂಕಿನ ನಾಗರಬೆಂಚಿ ಗ್ರಾಮದಲ್ಲಿ ಬೂತ್ ಮಟ್ಟದ ಕಾರ್ಯಕ್ರಮಕ್ಕೆ ಬಂದಂತ ಶಾಸಕ ಆರ್ ಬಸವನಗೌಡ ತುರ್ವಿಹಾಳ ರವರಿಗೆ ದೇಣಿಗೆ ನೀಡಿ ಶುಭ ಹಾರೈಸಿದ ಪುಟ್ಟ ಪೋರಿ
ಅಕ್ಷತಾ ಕೆಳಗಿನಮನೆ.

ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕ್ರಮಕ್ಕೆ ಬಂದಂತ ಶಾಸಕ ಆರ್ ಬಸವನಗೌಡ ತುರ್ವಿಹಾಳ ರವರಿಗೆ ನಾಗರಬೆಂಚಿ ಗ್ರಾಮದ ಅಕ್ಷತಾ ಎನ್ನುವ ಪುಟ್ಟ ಬಾಲೆ ತಂದೆ ತಾಯಿ ಹಾಗೂ ಅಣ್ಣ ಕೊಟ್ಟ ಹಣವನ್ನು ಕೂಡಿಟ್ಟು ತನ್ನ ಸ್ವಂತ ಖರ್ಚಿಗೆ ನೀಡಿದ್ದ ಅಷ್ಟು ಇಷ್ಟು ಹಣ ಸಂಗ್ರಹಿಸಿದ್ದ ಹಣವನ್ನು ಮಸ್ಕಿ ಕ್ಷೇತ್ರದ ಜನಪ್ರಿಯ ಶಾಸಕ ಆರ್ ಬಸನಗೌಡ ತುರವಿಹಾಳ ರವರಿಗೆ ನೀಡಿ ಮುಂಬರುವ ಚುನಾವಣೆ ಗೆ ನೀಡಿದ್ದು ಮತ್ತೊಮ್ಮೆ ನೀವೇ ಶಾಸಕರಾಗಿ ಬರಬೇಕು ಎಂಬುದು ನನ್ನ ಮನದಾಸೆ ಎಂದು ಹೇಳಿ ತನ್ನ ದೇಣಿಗೆಯನ್ನು ನೀಡಿದ್ದಾಳೆ. ಕಾರ್ಯಕ್ರಮದಲ್ಲಿ ನೆರೆದ ಕಾರ್ಯಕರ್ತರು ಆಶ್ಚರ್ಯಚಕಿತರಾದರು.

ಇದೇ ಸಂದರ್ಭದಲ್ಲಿ ಹನುಮಂತಪ್ಪ ಮುದ್ದಾಪುರ ಬ್ಲಾಕ್ ಕಾಂಗ್ರೇಸ್ ಗ್ರಾಮಿಣ ಘಟಕ ಅಧ್ಯಕ್ಷರು,ಬಸನಗೌಡ ಕಾರಲ ಕುಂಟೆ,ಅಶೋಕ್ ನಾಗರಬೆಂಚಿ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.

Post a Comment

Previous Post Next Post