ಹರಪನಹಳ್ಳಿ:ಕಾಂಗ್ರೇಸ್ ಪ್ರಮುಖರನ್ನು ಸನ್ಮಾನಿಸಿದ,ಶ್ರೀಮತಿ ಎಂಪಿ ವೀಣಾ ಮಹಾಂತೇಶ್



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ವಿಜಯನಗರ, ಮಾರ್ಚ್ 03 : ಜಿಲ್ಲೆ ಹರಪನಹಳ್ಳಿ, ಪಟ್ಟಣದ ಪಕ್ಷದ ಜನ ಸಂಪರ್ಕ ಕಚೇರಿಯಲ್ಲಿ. ಹರಪನಹಳ್ಳಿ ಕ್ಷೇತ್ರದ ಜನಪ್ರಿಯ ನಾಯಕಿ ಹಾಗೂ ಸಮಾಜಸೇವಕರಾದ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ರವರು,ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಅಧ್ಯಕ್ಷರಾಗಿ ಮರು ಆಯ್ಕೆಯಾದ, ಶ್ರೀ ಹದಿಮನಿ ಶಿವಕುಮಾರ್ ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿಯಾಗಿ ಮರು ನೇಮಕಗೊಂಡ ಬಸವರಾಜ್ ಉಪ್ಪಾರ್ ರವರನ್ನು ಸನ್ಮಾನಿಸಿದರು. ಅವರು ಪಟ್ಟಣದ ಆಚಾರ್ಯ ಲೇಔಟ್ ನಲ್ಲಿರುವ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ, ಪಕ್ಷದ ಪ್ರಮುಖ ಪದಾಧಿಕಾರಿಗಳನ್ನ ಸನ್ಮಾನಿಸುವುದರೊಂದಿಗೆ ಅವರನ್ನು ಗೌರವಿಸಿದರು. ಅವರು ಇದೇ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಬಗ್ಗೆ, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಕವಿತಾ ವಾಗೀಶ್, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬಿ, ಲಕ್ಷ್ಮಿಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಪರಶುರಾಮಪ್ಪ, ಕುರುಬ ಸಮಾಜದ ತಾಲೂಕು ಉಪಾಧ್ಯಕ್ಷರಾದ ನಾಗರಾಜ್, ಹಾಗೂ ಕಾಂಗ್ರೆಸ್ ಮುಖಂಡರುಗಳು ಮತ್ತು ಮಹಿಳೆಯರು ಯುವಕರು ಉಪಸ್ಥಿತರಿದ್ದರು.

Post a Comment

Previous Post Next Post