ಜಯಂತಿಗಳ ಪೂರ್ವಭಾವಿ ಸಭೆ ಯಶಸ್ವಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 04 : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಶ್ರೀ ಯೋಗಿ ನಾರಾಯಣ ಯತಿಂದ್ರ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ಶುಕ್ರವಾರ ಮದ್ಯಾಹ್ನ 3 ಗಂಟೆಗೆ ಸಭೆ ನಡೆಸಲಾಯಿತು.
ದಿನಾಂಕ 05 -03-2023 ರಂದು ಇರುವ ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ದಿನಾಂಕ 
07 -03-2023 ರಂದು ಶ್ರೀ ಯೋಗಿ ನಾರಾಯಣ ಯತಿಂದ್ರ (ಕೈವಾರ ತಾತಯ್ಯ) ಜಯಂತಿಯ ಅಂಗವಾಗಿ ಶುಕ್ರವಾರ ಮದ್ಯಾಹ್ನ 3 ಗಂಟೆಗೆ ಗ್ರೇಡ್ 2 ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಜಯಂತಿಗಳ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಕಛೇರಿಯಲ್ಲಿ ಫೋಟೋ ಪೂಜೆ ಜರುಗುವುದು ನಂತರ ಸಮಾಜ ಭಾಂದವರು ತಮ್ಮ ಹೆಚ್ಚಿನ ಆಸಕ್ತಿಯ ಮೇರೆಗೆ ಫೋಟೊ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡುವುದಾದರೆ ತಾಲೂಕ ಆಡಳಿತದ ಅಧಿಕಾರಿಗಳು ಬಂದು ಭಾಗವಹಿಸಲಾಗುವುದು ಎಂದು ಚರ್ಚೆ ನಡೆಸಲಾಯಿತು. 


ಇದೇ ಸಂದರ್ಭದಲ್ಲಿ

ಅಮರಪ್ಪ ಗುಡುದೂರು,ಸಿದ್ದಯ್ಯ ಹಿರೇಮಠ, ಶೆಟ್ಟಿ ಬಾಬು, ಮಲ್ಲಯ್ಯ ಕೆ ನೀರಾವರಿ ಇಲಾಖೆ, ಗದ್ದೆಪ್ಪ ಪುರಸಭೆ, ಗುರುನಾಥ ಸಿಬ್ಬಂದಿ,ಜಂಗಮ ಸಮುದಾಯ ಭಾಂದವರು ಹಾಗೂ ಬಲಿಜ ಸಮಾಜ ಭಾಂದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





Post a Comment

Previous Post Next Post