ಪ್ರಕೃತಿ ಫೌಂಡೇಶನ್ ವತಿಯಿಂದನೂತನ ವಧು ವರರಿಗೆ ಸಸಿ ನೀಡಿ ಅಭಿನಂದನೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 04 : ತಾಲ್ಲೂಕಿನ ಗೌಡನಬಾವಿ ಗ್ರಾಮದ ಶ್ರೀ ಕಟ್ಟೆ ಬಸವಲಿಂಗೇಶ್ವರ 30 ನೇ ಜಾತ್ರೆ ಪಲ್ಲಕ್ಕಿ ಮಹೋತ್ಸವ ಹಾಗೂ 101 ಜೋಡಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನೂತನ ವಧುವರರಿಗೆ ಸಸಿ ಕೊಟ್ಟು ಶುಭಾಶಯ ಕೋರಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶ್ರೀ ಮರೀಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಊಟಕನೂರ ಹಾಗೂ ಶ್ರೀ ನಾಗಪ್ಪ ತಾತನವರ ಶಿಷ್ಯರಾಗಿರುವ ಶ್ರೀ ಅಮರೇಶ್ ತಾತನವರು ಮತ್ತು ಶ್ರೀ ಇರಕಲ್ ಮಠದ ಶ್ರೀಗಳು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಕೃತಿ ಫೌಂಡೇಶನ್ (ರಿ)ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ಗಿಮಠ, ಬಿ ಮೌನೇಶ್, ಶಿವಪುತ್ರ ಕಲ್ಮನಿ, ಹನುಮೇಶ್, ಶಿವಕುಮಾರ್, ದುರಗೇಶ್, ಗೌಡನಬಾವಿ ಗ್ರಾಮದ ಗುರು ಹಿರಿಯರು ಯುವಕರು ಪ್ರಕೃತಿ ಫೌಂಡೇಶನ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post