ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಾಂಗ್ರೇಸ್ ಕಾರ್ಯಕರ್ತರ ಮನವಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 20 : ಪಟ್ಟಣದ ಕಾಂಗ್ರೇಸ್ ಕಚೇರಿಯಿಂದ ಬಸವೇಶ್ವರ ನಗರ , ವಾಲ್ಮೀಕಿ ವೃತ್ತ, ಪೆಟ್ರೋಲ್ ಬಂಕ್ ಮಾರ್ಗವಾಗಿ ಕಾಲ್ನಡಿಗೆ ಜಾಥಾ ನಡೆಸಿ ಪೋಲೀಸ್ ಇಲಾಖೆ ರಕ್ಷಣೆಯೊಂದಿಗೆ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತ ಸೇರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿದ ಸಚಿವ ಅಶ್ವತ್ ನಾರಾಯಣ್ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಘೋಷಣೆ ಕೂಗುತ್ತಾ ಧರಣಿ ನಡೆಸಿ ನಂತರ ಗ್ರೇಡ್ 2 ತಹಶೀಲ್ದಾರರ ಷಣ್ಮುಖಪ್ಪ ಮಾನವಿ ರವರ ಮುಖಾಂತರ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರುವಿ ಹಾಳ ರವರ ನೇತೃತ್ವದಲ್ಲಿ ಸರ್ವ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ ದೇಶ ನಮ್ಮ ಸಂವಿಧಾನದ ಆಶಯದಂತೆ ಸರ್ಕಾರ ನಡೆದುಕೊಳ್ಳುವುದನ್ನು ಮರೆತು ಧರ್ಮ ಮತ್ತು ಜಾತಿಯ ನಡುವೆ ದ್ವೇಷದ ಬಿಜೆಪಿ ಬೀಜಬಿತ್ತಿ, ಜವಾಬ್ದಾರಿ ಹಿತ ಸ್ಥಾನದಲ್ಲಿರುವ ಉನ್ನತ ಶಿಕ್ಷಣದ ಸಚಿವರಾದ ಡಾ.ಅಶ್ವಥ್ ನಾರಾಯಣ್ ರವರು ಸಾರ್ವಜನಿಕ ಸಭೆಯಲ್ಲಿ ಟಿಪ್ಪು ಸುಲ್ತಾನರನ್ನು ಉಲ್ಲೇಖಿಸಿ ಮಾತನಾಡುತ್ತಾ ಟಿಪ್ಪು ಸುಲ್ತಾನ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂದು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದ ಜನತೆಗಾಗಿ ಜನಪರ ಯೋಜನೆಗಳು ಎಲ್ಲಾ ವರ್ಗದ ಬಡವರಿಗಾಗಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮತ್ತು ಮಹಿಳೆಯರಿಗೆ ಯುವಕರಿಗೆ ಬಹಳಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯದ ಜನತೆಗೆ ಸರ್ವೋತ್ತಮ ಅಭಿವೃದ್ಧಿಗಾಗಿ ಶ್ರಮಿಸಿದಂತಹ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ ಸಚಿವ ಅಶ್ವಥ್ ನಾರಾಯಣ್ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶಾಸಕ ಆರ್ ಬಸನಗೌಡ ತುರುವಿಹಾಳ ರವರು ಮಾಜಿ ಎಂ ಎಲ್ ಸಿ ಶರಣಪ್ಪ ಮಟ್ಟೂರು, ಮಲ್ಲಿಕಾರ್ಜುನ್ ಪಾಟೀಲ್ ಯದ್ದಲ ದಿನ್ನಿ,ಹನುಮಂತಪ್ಪ ಮುದ್ದಾಪೂರ ಹಾಗೂ ಸರ್ವ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಗ್ರೇಡ್ 2 ತಹಶೀಲ್ದಾರರಾದ ಷಣ್ಮುಖಪ್ಪ ಮಾನವಿ ಇವರ ಮುಖಾಂತರ ರಾಜ್ಯದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ

ಮಲ್ಲಯ್ಯ ಬಳ್ಳಾ, ಮಲ್ಲಯ್ಯ ಮುರಾರಿ ಮಸ್ಕಿ,ಪೌಲ್ ರಾಜ್ ಯದ್ದಲದಿನ್ನಿ, ವಿಜಯ್ ಕುಮಾರ್ ಹೂವಿನ ಭಾವಿ, ಕೃಷ್ಣ ಡಿ ಚಿಗರಿ, ಹನುಮೇಶ್ ಬಾಗೋಡಿ, ಸಿದ್ದು ಮುರಾರಿ, ನಾಗರಡ್ಡೆಪ್ಪ ದೇವರಮನಿ, ಬಸನ ಗೌಡ ಮೆದಿಕಿನಾಳ, ದೇವಪ್ಪ ಹಿರೇ ಕಡಬೂರು, ದಾನಪ್ಪ ಮೆದಿಕಿನಾಳ, ಗೂಗ್ಲಿ ಬಸವ, ಹನುಮಂತ ಮೆದಿಕಿನಾಳ, ರವಿ ಡಿ ಚಿಗರಿ,ಮೌನೇಶ್ ಮೆದಿಕಿನಾಳ ಸೇರಿದಂತೆ ವಿವಿಧ ಗ್ರಾಮೀಣ ಭಾಗದ ಕಾಂಗ್ರೇಸ್ ಕಾರ್ಯಕರ್ತರು ಭಾಗಿಯಾಗಿದ್ದರು.



Post a Comment

Previous Post Next Post