ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಸೇಡಂ, ಫೆಬ್ರುವರಿ 20 : ತಾಲ್ಲೂಕಿನ ಹಾಬಾಳ ಟಿ ಗ್ರಾಮದಲ್ಲಿ ನಡೆದ 903ನೇಯ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿಯ ಪ್ರಯುಕ್ತ ಸೇಡಂ ಕೋಲಿ ಕಬ್ಬಲಿಗ ಸಮಾಜದ ತಾಲ್ಲೂಕು ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮೆಕ್ಯಾನಿಕ್ ಇವರು ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀ ಮಾಣಿಕಪ್ರಭು ಗುಡಸಿ, ನಗರ ಅಧ್ಯಕ್ಷರಾದ ಶ್ರೀ ಶಾಂತಕುಮಾರ ಚನ್ನಕ್ಕಿ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಚನ್ನಬಸಪ್ಪ ನಾಟಿಕಾರ, ತೆಲ್ಕೂರ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ರವಿಕುಮಾರ ಚಿತ್ತಾಪುರ, ಚಿಂಚೋಳಿ ASI ಶ್ರೀ ಗೌರಿಶಂಕರ, ಶ್ರೀ ಭೀಮಣ್ಣ ತಳವಾರ, ಶ್ರೀ ರಮೇಶ್‌ ತಾಯಿತ್ ಹಾಗೂ ಊರಿನ ಹಿರಿಯರು, ಮಾತೆಯರು, ಯುವಕರು ಉಪಸ್ಥಿತರಿದ್ದರು.

Post a Comment

Previous Post Next Post