ನಕಲಿ ರಶೀದಿ ನೀಡಿ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಭಕ್ತರಿಗೆ ನಕಲಿ ಸ್ವಾಮೀಜಿ ಗಳಿಂದ ಮೋಸ : ಅಮರಪ್ಪ ಗುಡುದೂರು



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 07 : ಐತಿಹಾಸಿಕ ಭ್ರಮರಾಂಭ
ಮಲ್ಲಿಕಾರ್ಜುನ ದೇವಸ್ಥಾನದಲ್ಲಿ 
ಲಕ್ಷ ದೀಪೋತ್ಸವ,ಅನ್ನ ದಾಸೋಹ
ಕಾರ್ಯಕ್ರಮ ದೇವಸ್ಥಾನ ಕಟ್ಟುತ್ತಾ 
ಇದೆ ಎಂದು ಕೆಲವರು ಕಾವಿ ಬಟ್ಟೆ ತೊಟ್ಟು ನಕಲಿ ರಶೀದಿ ಪುಸ್ತಕ ಮುದ್ರಿಸಿ ಕೊಂಡು 
ಹಳ್ಳಿ, ಪಟ್ಟಣಗಳಲ್ಲಿ
ಭ್ರಮ ರಾಂಭ ಮಲ್ಲಿಕಾರ್ಜುನ ಭಕ್ತರಿಂದ ಹಣ ಪಡೆದು ಕೊಂಡು ಜನರಿಗೆ ಸುಳ್ಳು ಹೇಳಿ ಭಕ್ತರ ನಂಬಿಕೆಗೆ ಮೋಸ ಮಾಡಲಾಗುತ್ತಿದೆ ಎಂದು ದೇವ ಸ್ಥಾನ ಸಮಿತಿ ಕಾರ್ಯದರ್ಶಿ ಅಮರಪ್ಪ ಗುಡುದೂರು ಪತ್ರಿಕಾ ಹೇಳಿಕೆ ಮೂಲಕ ಭಕ್ತರಲ್ಲಿ ಮನವಿ ಮಾಡಿಮಾಡಿದ್ದಾರೆ.


ಮಸ್ಕಿ ತಾಲೂಕಿನಾದ್ಯಂತ ಕೆಲ ವ್ಯಕ್ತಿಗಳು ದೇವಸ್ಥಾನ ಅಭಿವೃದ್ಧಿ ಸಮಿತಿ, ಹಾಗೂ ಸೇವಾ ಸಮಿತಿ ಹೆಸರಿನಲ್ಲಿ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದು ಗ್ರಾಮೀಣ, ನಗರ ಪ್ರದೇಶಗಳಿಗೆ ಕಾರು, ಬೈಕು,ಹಾಗೂ ಬಸ್ ಗಳಲ್ಲಿ ತೆರಳಿ ಭಕ್ತರಿಗೆ ಸುಳ್ಳು ಹೇಳಿ ಭಕ್ತರನ್ನು ನಂಬಿಸಿ ಲಕ್ಷಾಂತರ ರೂ ಹಣ ದೇಣಿಗೆ ಪಡೆದು ಕೊಂಡು ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. 

ಇಂತಹ ವ್ಯಕ್ತಿಗಳ ಬಗ್ಗೆ ಭಕ್ತರು ಎಚ್ಚರ ದಿಂದ ಇರಬೇಕು ಎಂದು ವರ್ಷಗಳ ಹಿಂದೆ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಲಾಯಿತು.ಆದರೂ ಕೆಲವರು ಇನ್ನೂ ಅದೇ ಕಾಯಕದಲ್ಲಿ ನಿರತರಾಗಿದ್ದಾರೆ.
ನಕಲಿ ರಶೀದಿ ಪುಸ್ತಕ ಮುದ್ರಿಸಿ ಕೊಂಡು ಕೆಲ ವ್ಯಕ್ತಿಗಳು ಖಾವಿ ಧರಿಸಿ ಕೊಂಡು ದೇವರ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. ಮೋಸದಿಂದ ಸುಳ್ಳು ಹೇಳಿ ಬಂದಂತಹ ಹಣವನ್ನು ಮೋಜುಮಸ್ತು ಮಾಡುತ್ತಾರೆ.


ಪೊಲೀಸ್‌ ಇಲಾಖೆ ಅಧಿಕಾರಿಗಳು ನಕಲಿ ರಶೀದಿ ಪುಸ್ತಕ ಮುದ್ರಿಸಿ ಭಕ್ತರಿಗೆ ವಂಚನೆ ಮಾಡುತ್ತಿರುವ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು ಎಂದು ದೇವಸ್ಥಾನ ಸಮಿತಿ ಮುಖಂಡರು ಮನವಿ ಮಾಡಿದ್ದರೂ. ಹಾಗೆಯೇ
ಈ ಬಗ್ಗೆ ಭ್ರಮ ರಾಂಭ ಮಲ್ಲಿಕಾರ್ಜುನ ಭಕ್ತರು ಎಚ್ಚರದಿಂದ ಇರಬೇಕು. ಯಾರಾ ದರೂ ಭ್ರಮರಾಂಭ ಮಲ್ಲಿಕಾರ್ಜುನ ದೇವರ ಹೆಸರು ಹೇಳಿಕೊಂಡು ಹಣ ಕೇಳಲು ಬಂದರೆ ಸಮೀಪದ ಠಾಣೆಗೆ ದೂರು ನೀಡಬೇಕು ಎಂದು ದೇವ ಸ್ಥಾನ ಸಮಿತಿ ಕಾರ್ಯದರ್ಶಿ ಅಮರಪ್ಪ ಗುಡುದೂರು ಪತ್ರಿಕಾ ಹೇಳಿಕೆ ಮೂಲಕ ಭಕ್ತರಲ್ಲಿ ಮನವಿ ಮಾಡಿದ್ದಾರೆ.


Post a Comment

Previous Post Next Post