ಬೆಟ್ಟದ ಆಂಜನೇಯ ದೇವಸ್ಥಾನ ಸ್ವಚ್ಛಗೊಳಿಸಿ ಸಸಿ ನೆಟ್ಟ ಪ್ರಕೃತಿ ಫೌಂಡೇಶನ್



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 08 : ಪಟ್ಟಣದ ಬೆಟ್ಟದ ಹಿಂಭಾಗದಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಸುತ್ತಲು ಪ್ರಕೃತಿ ಫೌಂಡೇಶನ್ ಮಸ್ಕಿ ವತಿಯಿಂದ ಸ್ವಚ್ಚಗೊಳಿಸಿ ನಂತರ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಲಾಯಿತು.

ಬೆಟ್ಟದ ಹಿಂಭಾಗದಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಸುತ್ತಲು ಇರುವ ಕಸ ಕಡ್ಡಿ ಪ್ಲಾಸ್ಟಿಕ್ ಗಳನ್ನು ಒಂದು ಕಡೆ ಗುಡಿಸಿ ಬೆಂಕಿ ಹಚ್ಚಿ ಸ್ವಚ್ಛಗೊಳಿಸಲಾಯಿತು. ಸಸಿಗಳನ್ನು ಹಚ್ಚುವುದು ಅಷ್ಟೇ ಅಲ್ಲದೆ ಅವುಗಳ ಪಾಲನೆ ಪೋಷಣೆ ಮಾಡಿ ಬೆಳೆಸುವುದು ಪ್ರಕೃತಿ ಫೌಂಡೇಶನ್ ಕರ್ತವ್ಯ ನಮ್ಮ ನಡೆ ಪರಿಸರ ಸಂರಕ್ಷಣೆಯ ಕಡೆ ಪ್ರಕೃತಿ ಫೌಂಡೇಶನ್ ಮಸ್ಕಿ ಸಂಸ್ಥಾಪಕ ಅಧ್ಯಕ್ಷ (ಗ್ರೀನ್ ಆರ್ಮಿ) ಶಿವಮೂರ್ತಿ ಗದ್ಗಿಮಠ ಪತ್ರಿಕೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Post a Comment

Previous Post Next Post