UDAYAVANI NEWS
ಹುಣಸಗಿ ಫೆಬ್ರುವರಿ 22 : ರಾಜ್ಯ ಸರಕಾರದಿಂದ ಹೂಗಾರ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶ ಹಿನ್ನೆಲೆಯಲ್ಲಿ ತಾಲೂಕಿನ ಹೂಗಾರ ಸಮಾಜದ ಎಲ್ಲಾ ಮುಖಂಡರು ಹಾಗೂ ಊರಿನ ಹಿರಿಯರು ಸೇರಿ ಶ್ರೀ ಬಸವೇಶ್ವರ ವೃತ್ತಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ವಿಜಯೋತ್ಸವವನ್ನು ಆಚರಿಸಲಾಯಿತು.
ಹುಣಸಗಿ: ರಾಜ್ಯ ಸರಕಾರದ ವತಿಯಿಂದ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದರಿಂದ ಸಮಾಜದ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದು ಸಮಾಜದ ಮುಖಂಡ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಅಯ್ಯಣ್ಣ ಹೂಗಾರ ಹೇಳಿದರು.
ನಂತರ ಮಾತನಾಡಿ ನಮ್ಮ ಸಮಾಜದ ಹಿರಿಯರು ಹಾಗೂ ಮುಖಂಡರು ಇಲ್ಲಿಯವರೆಗೆ ಜಿಲ್ಲಾಧ್ಯಂತ ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಈ ಅಭಿವೃದ್ಧಿ ನಿಗಮ ಆಗಲು ಯಶಸ್ವಿಗೊಳಿಸಿ ಕಾರಣೀಭೂತರಾದ ರಾಜ್ಯ ಅಧ್ಯಕ್ಷರಾದ ಬಸವರಾಜ್ ಹೂಗಾರ್ ರಾಯಚೂರು. ಅವರಿಗೂ ಹಾಗೂ ಸಮಾಜದ ಎಲ್ಲ ಹೋರಾಟಗಾರರಿಗೆ ಕೃತಜ್ಞತೆ ಹೇಳುವ ಮೂಲಕ ಇಂದು ರಾಜ್ಯ ಸರ್ಕಾರ ನಮ್ಮ ಈ ಸಮುದಾಯಕ್ಕೆ ಹೂಗಾರ್ ಅಭಿವೃದ್ಧಿ ನಿಗಮ ಅಂತ ಘೋಷಣೆ ಮಾಡಿದ ಸುಸಂದರ್ಭ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರಿಗೆ ಮೊದಲಿಗೆ ಅಭಿನಂದನೆಗಳನ್ನು ತಿಳಿಸಲಾಯಿತು.
ಜೊತೆಗೆ ನಮ್ಮ ಸಮಾಜವು ರಾಜ್ಯದಲ್ಲಿಯೇ ಅತ್ಯಂತ ಸಣ್ಣ ಸಮುದಾಯವಾಗಿದ್ದು ಈ ನಮ್ಮ ಸಮಾಜವನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವುದರ ಜೊತೆಗೆ ಸಮಾಜದ ಏಳಿಗೆಗಾಗಿ ಬಿ.ಜೆ.ಪಿ ಸರಕಾರವು ಹೂಗಾರ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪಿಸಿದ್ದು ನಮ್ಮ ಸಮಾಜಕ್ಕೆ ಕೊಟ್ಟ ಅತ್ಯಂತ ದೊಡ್ಡ ಕೊಡುಗೆಯಾಗಿದೆ ಈ ನಿಟ್ಟಿನಲ್ಲಿ ಸರಕಾರವು ಜಾರಿಗೆ ತಂದಿರುವ ಈ ಅಭಿವೃದ್ಧಿ ನಿಗಮದಲ್ಲಿ ಬರುವ ಸರಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜವು ಉನ್ನತ ಸ್ಥಾನದಲ್ಲಿ ಬೆಳೆಯಬೇಕೆಂದು ಹೇಳುವ ಮೂಲಕ ಸಮಾಜದ ಬದಲಾವಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜಸ್ವಾಮಿ ಸ್ಥಾವರಮಠ, ಜಂಗಮ ಸಮಾಜ ಜಿಲ್ಲಾ ಅಧ್ಯಕ್ಷ ನಾಗಯ್ಯಸ್ವಾಮಿ ದೇಸಾಯಿಗುರು, ಕರವೇ ಮುಖಂಡರಾದ ಮೌನೇಶ್ ಚಿಂಚೋಳಿ, ಕರವೇ ತಾಲೂಕ ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ ವಿನೋದ ದೊರೆ, ಪರಮಣ್ಣ ಬೇವಿನಕಟ್ಟಿ, ಆನಂದ್ ಬಾರಿಗಿಡ, ಗುಂಡು ಅಂಗಡಿ, ದೇವು ಬೈಚಬಾಳ, ಸೇರಿದಂತೆ ಹೂಗಾರ್ ಸಮಾಜದ ಜಿಲ್ಲಾ ಉಪಾಧ್ಯಕ್ಷ ವೀರಭದ್ರಪ್ಪ ಹೂಗಾರ್, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಈರಣ್ಣ ಹೂಗಾರ್. ತಾಲೂಕು ಗೌರವಾಧ್ಯಕ್ಷ ಸಂಗಣ್ಣ ಹೂಗಾರ್, ಕರಿಬಾವಿ ತಾಲೂಕ ಅಧ್ಯಕ್ಷರಾದ ವೀರೇಶ್ ಹೂಗಾರ್, ನಿಂಗಣ್ಣ ಹೂಗಾರ್, ಅನಿಲ್ ಹೂಗಾರ್, ಚಂದಪ್ಪ ಹೂಗಾರ್, ಪರಮಣ್ಣ ಹೂಗಾರ್, ಅಮರಣ್ಣ ಹೂಗಾರ್, ದೇವು ಹೂಗಾರ್, ಸಿದ್ದು ಹೂಗಾರ್, ಸೇರಿದಂತೆ ಹುಣಸಗಿ ಪಟ್ಟಣದ ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು