ಆರ್ಯ ಈಡಿಗ ಸಮಾಜದಿಂದ ಅಭಿನಂದನೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಫೆಬ್ರುವರಿ 23 : ರಾಜ್ಯ ಸರ್ಕಾರವು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಂಡಳಿಯನ್ನು ಘೋಷಿಸಿದ್ದು ನಮ್ಮ ಸಮಾಜದ ಏಳಿಗೆಗೆ ಮತ್ತು ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಕೊಳ್ಳುವುದರ ಜೊತೆಗೆ ಸರಕಾರದ ಯೋಜನೆಗಳು ನೇರವಾಗಿ ನಮ್ಮ ಸಮಾಜಕ್ಕೆ ಸಿಗುವಂತಾಗುತ್ತದೆ ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಸರಕಾರವು ಆದೇಶಿಸಿರುವ ನಿಗಮದಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಬೇಕೆಂದು ಹುಣಸಗಿ ತಾಲೂಕಿನ  ಆರ್ಯ ಈಡಿಗ ಸಮಾಜದ ಉಪಾಧ್ಯಕ್ಷ  ಹಳ್ಳೆಪ್ಪ  ನಿಂಗಯ್ಯ ಗುತ್ತೇದಾರ್ ಅವರು ಸಮಾಜದ ಪರವಾಗಿ ರಾಜ್ಯ ಸರಕಾರಕ್ಕೆ ಮತ್ತು ಸಿ.ಎಂ.‌ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Post a Comment

Previous Post Next Post