UDAYAVANI NEWS
ರಬಕವಿ ಬನಹಟ್ಟಿ, ಫೆಬ್ರುವರಿ 22 : ಭೀಮ್ ಆರ್ಮಿ ಏಕತಾ ಮೀಷನ್ ಸಂಘಟನೆ ಇವರ ನೇತೃತ್ವದಲ್ಲಿ ಪ್ರತಿಭಟನೆ, ಬೆಂಗಳೂರು ಜೈನ್ ವಿಶ್ವವಿದ್ಯಾಲಯದ ಟೀಚರ್ ಮತ್ತು ವಿದ್ಯಾರ್ಥಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಕ್ಕಾಗಿ ಜೈನ ಕಾಲೇಜು ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಮತ್ತು ಜೈನ ಕಾಲೇಜು ಮಾನ್ಯತೆ ರದ್ದು ಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ಗಾಂಧಿ ಸರ್ಕಲ್ ದಿಂದ ಪ್ರತಿಭಟನೆ ಮುಕಾಂತರ ತಹಶಿಲ್ದಾರರ ಕಾರ್ಯಾಲಯಕ್ಕೆ ಬಂದು ತಹಶಿಲ್ದಾರ ಡಾ|| ಡಿ. ಎಚ್. ಹೂಗಾರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಅದೇ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆ ಜಿಲ್ಲಾ ಅದ್ಯಕ್ಷ ರಮೇಶ ಬಳೋಲಗಿಡದ ಹಾಗೂ ಎಸ್ ಡಿ ಪಿ ಐ ಪಕ್ಷದ ತಾಲೂಕಿನ ಅದ್ಯಕ್ಷರು ಪರಶುರಾಮ ಮೇತ್ರಿ ಹಾಗೂ ಭೀಮ್ ಆರ್ಮಿ ಸಂಘಟನೆ ಸದಸ್ಯರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು