UDAYAVANI NEWS
ತಿ. ನರಸೀಪುರ, ಫೆಬ್ರುವರಿ 15 : ದಲಿತ ಕಲಾವಿದರ ಸಂಘವನ್ನು (ಬಣ್ಣ ರಹಿತ) ಅಸ್ತಿತ್ವಕ್ಕೆ ತರಲಾಗಿದ್ದು, ಫೆ.19ರ ಭಾನುವಾರ ಸಂಘದ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ನೆರವೇರಿಸಲಿದ್ದಾರೆ ಎಂದು ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ ಉಮಾಮಹದೇವ್ ತಿಳಿಸಿದರು.
ಪಟ್ಟಣದ ಅತಿಥಿಗೃಹದಲ್ಲಿ ಸಂಘದ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಕಾರ್ಯಕ್ರಮದ ವಿವರ ನೀಡಿದರು.ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೊದಲಿಗೆ ಪಟ್ಟಣದ ಚೌಡಯ್ಯ ವೃತ್ತದಲ್ಲಿ ಪಿಟೀಲು ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾಂಸ್ಕೃತಿಕ ಮೆರವಣಿಗೆಗೆ ಯುವ ಮುಖಂಡ ಸುನಿಲ್ ಬೋಸ್, ಚಿತ್ರನಟ ಚೇತನ್ ಅಹಿಂಸಾ ಚಾಲನೆ ನೀಡಲಿದ್ದಾರೆ. ಬಳಿಕ ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವೈದ್ಯಾಧಿಕಾರಿ ಡಾ. ರೇವಣ್ಣ ಭಾಗವಹಿಸಲಿದ್ದಾರೆ ಎಂದರು.ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯ ಲಿರುವ ಕಾರ್ಯಕ್ರಮ ದಲ್ಲಿ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣ ಭಾಗವಹಿಸುವರು ಎಂದು ತಿಳಿಸಿದರು. ಶಾಸಕ ಎಂ.ಅಶ್ವಿನ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನಾಮಫಲಕ ಅನಾವರಣ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಸಿ. ನರೇಂದ್ರ, ತಾ.ಪಂ ಇಒ ಕೃಷ್ಣ, ತಹಸಿಲ್ದಾ ಗೀತಾ, ಎಸ್. ಎನ್. ಸಿದ್ದಾರ್ಥ, ಡಾ. ಜ್ಞಾನಪ್ರಕಾಶ್, ಪುರಸಭಾಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ, ಕೆ.ಆರ್. ಆಸ್ಪತ್ರೆ ಅಧೀಕ್ಷಕ ಡಾ. ಬಿ.ಎಲ್. ನಂಜುಂಡಸ್ವಾಮಿ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜೇಗೌಡ, ಚಿನ್ನಸ್ವಾಮಿ, ಗಣೇಶ್, ಶ್ರೀಧರ್, ಡಿ.ಆರ್.ಮೂರ್ತಿ ಮತ್ತಿತರರು ಇದ್ದರು.
Tags
ಜಿಲ್ಲಾ ಸುದ್ದಿಗಳು