ಪ್ರಕೃತಿ ಫೌಂಡೇಶನ್ (ರಿ) ವತಿಯಿಂದಪುಲ್ವಾಮ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ದೀಪ ನಮನ ಹಾಗೂ ವೀರ ಯೋಧರ ನೆನಪಿಗೇ ಸಸಿ ವಿತರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಫೆಬ್ರುವರಿ 15 : ತಾಲೂಕಿನ ಬಳಗಾನೂರ ನಲ್ಲಿ ಪ್ರಕೃತಿ ಫೌಂಡೇಶನ್ (ರಿ) ವತಿಯಿಂದ ಪುಲ್ವಾಮ ದಾಳಿಯಲ್ಲಿ ಹುತಾತ್ಮ ವೀರ ಯೋಧರಿಗೆ ದೀಪ ನಮನ ಹಾಗೂ ವೀರ ಯೋಧರ ನೆನಪಿಗೇ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ಉದ್ದೇಶಿಸಿ
ಪ್ರಕೃತಿ ಫೌಂಡೇಶನ್ (ರಿ) ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ಗಿಮಠ ರವರು ಮಾತನಾಡಿ ದೇಶ ಭಕ್ತ ಬಂಧುಗಳೇ ಪರಿಸರ ಪ್ರೇಮಿಗಳೇ ಪಾಪಿ ಪಾಕಿಸ್ತಾನದ ಕುತಂತ್ರಕ್ಕೆ ದಿ:14/02/2019 ರಲ್ಲಿ ಪುಲ್ವಾಮಾದಲ್ಲಿ ನಡೆದ ಭೀಕರ ದುರಂತದಲ್ಲಿ ನಮ್ಮ ಭಾರತ ಮಾತೆಯ ಹೆಮ್ಮೆಯ 40 ಕ್ಕೂ ಹೆಚ್ಚು ವೀರ ಯೋಧರನ್ನು ಕಳೆದುಕೊಂಡೆವು ತಾಯಿ ಭಾರತ ಮಾತೆ ತನ್ನ ವೀರ ಮಕ್ಕಳನ್ನು ಕಳೆದುಕೊಂಡ ಕರಾಳ ದಿನ, ಶತಕೋಟಿ ಭಾರತೀಯರ ಕಣ್ಣಂಚಿನಲ್ಲಿ ಕಣ್ಣೀರು ಇಳಿದ ದುರಂತ ದಿನ, ನಮ್ಮ ನಾಳೆಗಳಿಗಾಗಿ ತಮ್ಮ ನಾಳೆಯ ದಿನಗಳನ್ನು ತ್ಯಾಗ ಮಾಡಿದ ಪುಲ್ವಾಮ ದಾಳಿ ಹುತಾತ್ಮ ವೀರ ಯೋಧರಿಗೆ ಶತ ಕೋಟಿ ನಮನಗಳನ್ನು ಎಂದರು ನಂತರ ಹುತಾತ್ಮ ವೀರ ಯೋಧರಿಗೆ
ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲಾಯಿತು.

ಈ ವೇಳೆ, ಪ್ರಕೃತಿ ಫೌಂಡೇಶನ್ (ರಿ)
ಸಂಸ್ಥಾಪಕ ಅಧ್ಯಕ್ಷರು ಶಿವಮೂರ್ತಿ ಗದ್ಗಿಮಠ, ಈ ಸಂದರ್ಭದಲ್ಲಿ ಸೂರ್ಯ ನರಸಿಂಹ, ಶಿವಪುತ್ರ ಕಲ್ಮನಿ, ದೀಪಕ್ ಜೈನ್, ಹನುಮೇಶ್ ನಾಯಕ್, ಉಮೇಶ್ ಮಳ್ಳಿ, ಜಗದೀಶ್, ಶಿವು ಸಕ್ರಿ, ಸೋಮು,ಶ್ರೀಧರ್ ಕೊಂಡಾ,ಬಸವರಾಜ್, ರಾಜಾರಾಮ್,ಮತ್ತು ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಊರಿನ ಯುವಕರು ಉಪಸ್ಥಿತರಿದ್ದರು.

Post a Comment

Previous Post Next Post