ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾಗಿ ಜೆ. ತಿರುಮಾಲ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್. ವೆಂಕಟೇಶ್ ಆಯ್ಕೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಫೆಬ್ರುವರಿ 14 : ಕರ್ನಾಟಕ ಟೇಕ್ವಾಂಡೋ ಸಂಸ್ಥೆಯ ಕಾರ್ಯಕಾರಿ ಸಮಿತಿಯ 2023-2027ರ ಅವಧಿಗೆ ಅಧ್ಯಕ್ಷರಾಗಿ ತಿರುಮಾಲ್.ಜಿ, ಉಪಾಧ್ಯಕ್ಷರಾಗಿ ಸೈಯದ್ ಮನ್ಫೂಷ್, ಬಿ.ಎನ್.ಮಹೇಶ್ವರ ಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್.ವೆಂಕಟೇಶ್ ಆಯ್ಕೆಯಾಗಿದ್ದಾರೆ.

ತುಮಕೂರು ಜಿಲ್ಲೆಯ ತಿಪಟೂರಿನ ಶಿಕ್ಷಕರ ಭವನದಲ್ಲಿ ಕಾರ್ಯಕಾರಿ ಸಮಿತಿ ಮತ್ತು ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ನಟರಾಜು.ಟಿ.ಎಸ್, ಹಾಗೂ ತಲಂಗಾಣ ಟೇಕ್ವಾಂಡೋ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಶ್ರೀಹರಿ ಅವರ ಪರಿವೀಕ್ಷಣೆಯಲ್ಲಿ ಚುನಾವಣೆ ನಡೆಯಿತು.

ಜಂಟಿ ಕಾರ್ಯದರ್ಶಿಯಾಗಿ ಶ್ರೀಕಾಂತ್ ಎಂ.ಎಸ್. ಶಾಂತಿ, ಖಜಾಂಚಿಯಾಗಿ ಎಂ. ಅನಿತಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸರಿತಾ.ಎಂ, ಅರುಣ್ ಪದ್ಮು ರಾಥೋಂಡ್, ಮುರುಳಿ.ಪಿ, ಅಮೃತ್ ಅರುಣ್ ಕಾಡು, ಪದ್ಮಾವತಿ, ಎಂ ಹಾಗೂ ಲೆನಿನ್ ಕುಮಾರ.ಪಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಟೇಕ್ವಾಂಡೋ ಸಂಸ್ಥೆ ಪ್ರಕಟಣೆ ತಿಳಿಸಿದೆ.

Post a Comment

Previous Post Next Post