UDAYAVANI NEWS
ಮಸ್ಕಿ, ಜನವರಿ 18 : ಪಟ್ಟಣದ ಮಲ್ಲಯ್ಯ ಗುಡ್ಡದ ಹಿಂಬದಿಯಲ್ಲಿ ಹಾಗೂ ಮೆದಿಕಿನಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಇಸ್ಪೀಟ್ ಅಡ್ಡೆ ಕೇಂದ್ರಗಳಾಗಿ ನಿರ್ಮಾಣವಾಗಿದ್ದು, ಪೋಲೀಸ್ ಇಲಾಖೆಗೆ ತಿಂಗಳಾದರೆ ಸಾಕು ಇಲಾಖೆಗೆ ಬರುವ ಮಾಮೂಲಿ ಬಂದುಬಿಡಬೇಕು ಇಲ್ಲವಾದರೇ ಅಡ್ಡೆಗೆ ದಾಳಿ ಮಾಡಲಾಗುವುದು ಎಂಬುದು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ.
ಮಸ್ಕಿ ಮಲ್ಲಯ್ಯ ಗುಡ್ಡದ ಹಿಂಬದಿಯಲ್ಲಿ,ಮೆದಿಕಿನಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ,ಅಕ್ರಮವಾಗಿ ದೊಡ್ಡ ಮಟ್ಟದ ಅಕ್ರಮ ಇಸ್ಪೀಟ್ ಅಡ್ಡೆ ಕೇಂದ್ರಗಳಾಗಿ ನಿರ್ಮಾಣ ಆಗಿದ್ದು ಇದಕ್ಕೆಲ್ಲಾ ಪೋಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಹಟ್ಟಿ, ಲಿಂಗಸ್ಗೂರು, ಕವಿತಾಳ ಪಟ್ಟಣಗಳಿಂದ ಹಾಗೂ ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳು ಸೇರಿ ಒಂದೆಡೆ ಸೇರಿ ಇಸ್ಪೀಟ್ ಆಡಲಾಗುತ್ತಿದೆ. ಒಟ್ಟಿನಲ್ಲಿ ಯುವಕರ ಜೀವನ ಹಾಳು ಮಾಡಲು ಇಸ್ಪೀಟ್ ದಂಧೆ ನಡೆಯುತ್ತಿದ್ದು, ಇದಕ್ಕೆಲ್ಲಾ ಪೋಲೀಸ್ ಇಲಾಖೆ ಕುಮ್ಮಕ್ಕು ನೀಡುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ತಿಂಗಳ ಮಾಮೂಲಿ ನೀಡದಿದ್ದರೆ ಆ ಅಡ್ಡೆಯ ಮೇಲೆ ಪೊಲೀಸ್ ದಾಳಿ ನಡೆಸಲಾಗುತ್ತದೆ. ಈ ಅಕ್ರಮ ಚಟುವಟಿಕೆಗಳಿಗೆ ಇಲ್ಲವಾ ಕಡಿವಾಣ ಎಂಬುದು ಸಾರ್ವಜನಿಕರ ವಲಯದ ದೊಡ್ಡ ಪ್ರಶ್ನೆಯಾಗಿ ನಿಂತಿದೆ. ಆದ್ದರಿಂದ ಸಂಭಂದಪಟ್ಟ ಮೇಲಾಧಿಕಾರಿಗಳು ಇದರ ಬಗ್ಗೆ ಮಾಹಿತಿ ಪಡೆದು ಕಡಿವಾಣ ಹಾಕಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Tags
ಜಿಲ್ಲಾ ಸುದ್ದಿಗಳು