UDAYAVANI NEWS
ಮಸ್ಕಿ, ಜನವರಿ 18 : ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ನಡೆದ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ವಿಜ್ಞಾನ ಮೇಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನಮ್ಮ ವಿದ್ಯಾರ್ಥಿಗಳಾದ ಕುಮಾರ ರವಿತೇಜ,ಉಮೇಶ ಮುದ್ದಲಗುಂದಿ,ಕುಮಾರಿ ಭಾನುಪ್ರಿಯಾ ಹಾಗೂ ವಾಣಿ ತಂಡದವರು ವಿಜ್ಞಾನ ಮೇಳದಲ್ಲಿ ಭಾಗವಹಿಸಿ
ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು,
ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ನಮ್ಮ ಎಲ್ಲಾ ಶಿಕ್ಷಕರಿಗೆ
ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತಾ
ಇದೇರೀತಿ ರಾಜ್ಯ ಮಟ್ಟದಲ್ಲೂ ಕೂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯಲಿ ಎಂದು ವಸತಿ ಶಾಲೆಯ ಪ್ರಾಂಶುಪಾಲರಾದ ಗಂಗಪ್ಪ ಕವಿತಾಳ ರವರು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ, ಮಾರ್ಗದರ್ಶಕರಾದ ಆದಿಬಸವ ವಿಜ್ಞಾನ ಅಥಿತಿ ಶಿಕ್ಷಕರು, ದಾವಲಸಾಬ ಶಿಕ್ಷಕರು,
ಸೂಗಪ್ಪ,ಮಲ್ಲಿಕಾರ್ಜುನ, ವಿಜಯಕುಮಾರ್, ನಿಲಯಪಾಲಕರಾದ ಗೋಪಾಲ ಮತ್ತು ಶಿಕ್ಷಕಿಯರಾದ ಶ್ರೀಮತಿ ಹುಲಿಗೆಮ್ಮ,ಹನುಮಂತಮ್ಮ,
ಗಂಗಮ್ಮ ಮತ್ತು ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.
Tags
ಜಿಲ್ಲಾ ಸುದ್ದಿಗಳು