UDAYAVANI NEWS
ಮಸ್ಕಿ,ಜನವರಿ 17 : ತಾಲೂಕಿನ ಬಳಗಾನೂರ ಪಟ್ಟಣದ ನಾರಾಯಣ ನಗರ ಕ್ಯಾಂಪ್ ನಲ್ಲಿ ನಗರೋತ್ಥಾನ ಮೂರನೇ ಹಂತದ ಯೋಜನೆ ಅಡಿಯಲ್ಲಿ 73 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರಿ ಗೋಲ್ ಮಾಲ್ ಜರುಗಿದೆ ಎಂದು ಬಿ.ಮೌನೇಶ್ ಆರೋಪ.
ಬಳಗಾನೂರ ಪಟ್ಟಣದ ನಾರಾಯಣ ನಗರ ಕ್ಯಾಂಪ್ ನಲ್ಲಿ ನಗರೋತ್ಥಾನ ಮೂರನೇ ಹಂತದ ಯೋಜನೆ ಅಡಿಯಲ್ಲಿ 73 ಲಕ್ಷ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರಿ ಮೊತ್ತದ ಗೋಲ್ ಮಾಲ್ ಮಾಡಲಾಗಿದೆ. ಅರೆಬರೆ ಕಾಮಗಾರಿ ಮಾಡಿ ಬಿಲ್ ಎತ್ತುವಳಿ ಮಾಡಿಕೊಂಡು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸಾಮಗ್ರಿಗಳು ಮಳೆಗಾಳಿಗೆ ತುಕ್ಕು ಹಿಡಿದು ಅನಾಥವಾಗಿಬಿದ್ದಿವೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಯೋಜನೆ ರೂಪಿಸುವ ಸೋಗಿನಲ್ಲಿ ಈ ರೀತಿಯ ಗುತ್ತಿಗೆದಾರರೇ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುವ ಕೆಲಸ ಮಾಡಿದ್ದಾರೆ. ಈ ವಿಷಯ ಗೊತ್ತಿದ್ದು ಸುಮ್ಮನಿರುವ ಅಧಿಕಾರಿಗಳು. ಸಂಭಂದಪಟ್ಟ ಮೇಲಾಧಿಕಾರಿಗಳು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಅಪೂರ್ಣ ಗೊಳಿಸಿದ ಗುತ್ತಿಗೆದಾರರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಗುತ್ತಿಗೆದಾರರ ಲೈಸನ್ಸನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ ಬಳಗಾನೂರ ಅರೆಬರೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಕಿಡಿಕಾರಿದ್ದಾರೆ.
Tags
ಜಿಲ್ಲಾ ಸುದ್ದಿಗಳು