ಯುವ ಮತದಾರರ ಆಕರ್ಷಿಸಿದ ಬೂತ್ ವಿಜಯ ಬಾವುಟ ಅಭಿಯಾನ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 12 : ಪ್ರತಿ ಬೂತ್ ಮಟ್ಟದಲ್ಲಿ ವಿಜಯ ಅಭಿಯಾನದ ಮೂಲಕ ಎಲ್ಲಾ ಮತದಾರರನ್ನು ತಲುಪಿ ಬಿಜೆಪಿ ಸಾಧನೆ ತಿಳಿಸಿ ಮತಯಾಚನೆ ಮಾಡುವಲ್ಲಿ ಪೇಜ್ ಪ್ರಮುಖ್ ಪಾತ್ರ ಬಹು ಮುಖ್ಯ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ 
 ತಿಳಿಸಿದರು.

ಪಟ್ಟಣದ 5 ನೇ ವಾರ್ಡ್ ನಲ್ಲಿ ಬಿಜೆಪಿ ನಗರ ಘಟಕ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬ ಕಾರ್ಯಕರ್ತ ಅಭ್ಯರ್ಥಿ ರೀತಿ ಕೆಲಸ ಮಾಡುತ್ತಾರೆ. ಈ ಪೈಕಿ ಯುವಕರು ಅತೀ ಹೆಚ್ಚು ಒಲವು ತೋರಿರುವುದು ನಮ್ಮ ಪಕ್ಷಕ್ಕೆ ಬಲ ಬಂದಂತಾಗಿದೆ. ತಳ ಮಟ್ಟದಿಂದ ಪಕ್ಷ ಕಟ್ಟುವ ತಾಕತ್ತು ಬಿಜೆಪಿಗೆ ಮಾತ್ರ ಇದೆ ಎನ್ನುವ ಅಂಶ ಜನತೆಗೆ ತಿಳಿದಿದೆ. ಈ ನಿಟ್ಟಿನಲ್ಲಿ ಬೂತ್ ವಿಜಯ ಸಾಧಿಸಿ ನಮ್ಮ ಪ್ರತಾಪ್ ಗೌಡ ಪಾಟೀಲ್ ರವರನ್ನು
ಗೆಲ್ಲಿಸೋಣ ಪ್ರತಿ ಬೂತ್ ಮಟ್ಟದಲ್ಲಿ ಪ್ರತಿ ಮತದಾರರ ಬಳಿ ನಮ್ಮ ಕಾರ್ಯಕರ್ತರು ತಲುಪಲಿದ್ದಾರೆ. ಯುವ ಕಾರ್ಯಕರ್ತರ ಪಡೆಗೆ ಅಭಿವೃದ್ದಿಯ ಮಹತ್ವ ತಿಳಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆ ಬಗ್ಗೆ ತಿಳಿದಿದೆ. ಮಸ್ಕಿ ಕ್ಷೇತ್ರದಲ್ಲಿ ಈ ಅಭಿಯಾನ ನಿರೀಕ್ಷೆ ಮೀರಿ ಯಶಸ್ವಿಯಾಗಿ ನಡೆಯುತ್ತದೆ
ಪಟ್ಟಣದ 23 ಬೂತ್ ಗಳಲ್ಲಿ ಈ ಅಭಿಯಾನ ಯಶಸ್ವಿಗೊಳಿಸಿ ಬಿಜೆಪಿಯ ಗೆಲುವಿನ ಸೋಪಾನ ಹಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಪ್ರತಿ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸಲಾಯಿತು.

ಇದೇ ಸಂದರ್ಭದಲ್ಲಿ 

ಬಿಜೆಪಿ ಮುಖಂಡರು,5 ನೇ ವಾರ್ಡ ಬೂತ್ ಮಟ್ಟದ ಸರ್ವ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post