ವಿವೇಕಾನಂದ ಜಯಂತಿ ಪ್ರಯುಕ್ತ ಅಂತರ್ ಕಾಲೇಜು ಮಟ್ಟದ ಸ್ಪರ್ಧೆ ಕಾರ್ಯಕ್ರಮ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಜನವರಿ 12 : ಪಟ್ಟಣದಲ್ಲಿ 159ನೇ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಪ್ರೆಸಿಡೆನ್ಸಿ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯನ್ನು ನಡೆಸಲಾಯಿತು. 

159ನೇ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಪ್ರೆಸಿಡೆನ್ಸಿ ಪದವಿ ಮಹಾವಿದ್ಯಾಲಯ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ್ ತೊಂತನಾಳ ವಹಿಸಿದ್ದರು, ಪ್ರಾಚಾರ್ಯರಾದ ಅಶೋಕ್ ಗುಡುದೂರು, ವಿಶೇಷ ಅತಿಥಿಗಳಾಗಿ ಮರಿಸ್ವಾಮಿ ಹಾಲಾಪುರ ಜನನಿ ಕಾಲೇಜ್, ವಿನಯ ಹಿರೇಮಠ್ ವಿದ್ಯಾನಿಕೇತನ ಕಾಲೇಜ್, ಶ್ರೀಧರ ಗುಡಿ, ಶ್ರೀಧರ್ ಗುಡಿ, ಮನೋಹರ್ ಚಾಂದ್ ಪಾಷ ಪ್ರಭವಿತುಂ ಕಾಲೇಜ್ ವೇದಿಕೆಯ ಮೇಲೆ ಆಸೀನರಾಗಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಐಶ್ವರ್ಯ ತಂದೆ ಹನುಮೇಶ್ ಜನನಿ ಕಾಲೇಜ್ ಹಾಲಾಪುರ, ದ್ವಿತೀಯ ಬಹುಮಾನ ವೆಂಕಟೇಶ್ ವಿದ್ಯಾನಿಕೇತನ ಕಾಲೇಜ್ ಮಸ್ಕಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಜ್ಯೋತಿ ತಂ ಶೇಖರಪ್ಪ ಜನನಿ ಕಾಲೇಜ್ ಹಾಲಾಪುರ, ದ್ವಿತೀಯ ಬಹುಮಾನ ಶ್ರೀದೇವಿ ರಾಷ್ಟ್ರೀಯ ಕಾಲೇಜ್ ಮಸ್ಕಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ರಾಷ್ಟೀಯ ಕಾಲೇಜ ಮಸ್ಕಿ, ದ್ವಿತೀಯ ಬಹುಮಾನ ವಿದ್ಯಾನಿಕೇತನ ಕಾಲೇಜ್ ಮಸ್ಕಿ, ತೃತೀಯ ಬಹುಮಾನ ಜನನಿ ಕಾಲೇಜ ಹಾಲಾಪುರಕ್ಕೆ ಲಭಿಸಿದೆ.ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ವಂದನಾರ್ಪಣೆಯನ್ನು ಬಿ. ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ರಿಯಾನಬೇಗಂ ಮಸ್ಕಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭವಾನಿ.ಬಿ ಬಿ.ಕಾಂ ವಿದ್ಯಾರ್ಥಿನಿ ನಿರೂಪಿಸಿದರೆ, ಪ್ರತಾಪ್ ಬುದ್ದಿನ್ನಿ ಬಿ.ಕಾಂ ವಿದ್ಯಾರ್ಥಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ

ಪ್ರೆಸಿಡೆನ್ಸಿ ಕಾಲೇಜಿನ ಆಡಳಿತ ಮಂಡಳಿ,ವಿವಿಧ ಕಾಲೇಜು ಉಪನ್ಯಾಸಕರು,ಹಾಗೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.


Post a Comment

Previous Post Next Post