UDAYAVANI NEWS
ಮಸ್ಕಿ, ಜನವರಿ 11 : ತಾಲೂಕಿನ ಗೌಡನಬಾವಿ ಗ್ರಾಮ ಪಂಚಾಯತಿಗೆ ಮಂಗಳವಾರ ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಗೌಡನಬಾವಿ ಕ್ಯಾಂಪ್‌ನಲ್ಲಿ ನರೇಗಾದಡಿ ನಿರ್ಮಿಸಿದ ಸಿಸಿ ರಸ್ತೆ, ಶಾಲೆಯ ಕಂಪೌಂಡ್, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಂಗನವಾಡಿ ಶಾಲೆಯಲ್ಲಿ ದಾಖಲಾಗಿರುವ ಮಕ್ಕಳ ಸಂಖ್ಯೆ, ಊಟದ ಗುಣಮಟ್ಟದ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಗೌಡನಬಾವಿ ಗ್ರಾಮ ಪಂಚಾಯತಿಯ ನೂತನ ಕಟ್ಟಡ, ಸಿಸಿ ಕ್ಯಾಮರಾ, ಶಾಲೆಯ ಕಂಪೌಂಡ್ ಪರಿಶೀಲಿಸಿ, ಅಧ್ಯಕ್ಷರು, ಸದಸ್ಯರೊಂದಿಗೆ ಸಭೆ ನಡೆಸಿದರು. ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಅಮೃತ ಗ್ರಾಪಂ ಯೋಜನೆ ಜಾರಿಗೊಳಿಸಿದ್ದು, ತಕ್ಷಣ ಕಾಮಗಾರಿಗಳನ್ನು ಆರಂಭಿಸಿ, ಕಾಲಮಿತಿಯೊಳಗೆ ಮುಗಿಸಬೇಕು. ಘನ ತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಳಿಸಿ, ಹಳ್ಳಿಗಳಲ್ಲಿ ಕಸ ಸಂಗ್ರಹಣೆಗೆ ಕ್ರಮಕೈಗೊಳ್ಳಬೇಕು ಎಂದರು. ನರೇಗಾ ಕಾಮಗಾರಿ, 15 ನೇ ಹಣಕಾಸು ಆಯೋಗದ ಕಡತ ಪರಿಶೀಲಿಸಿದರು. ಈ ವೇಳೆ ಗ್ರಾಪಂ ಅಧ್ಯಕ್ಷರಾದ ಹನುಮಮ್ಮ ಬೆಟ್ಟಪ್ಪ, ಸದಸ್ಯರಾದ ಶಿವಪ್ಪ ಬುದ್ದಿನ್ನಿ, ಗ್ರಾಪಂ ಪಿಡಿಒ ಲಕ್ಷ್ಮೀಕಾಂತ, ಡಿಇಒ, ಬಿಎಫ್‌ಟಿ ಇತರರಿದ್ದರು.
Tags
ಜಿಲ್ಲಾ ಸುದ್ದಿಗಳು