ಪ್ರತಾಪ್ ಗೌಡ ಪಾಟೀಲ್ ಶಾಸಕರು ಆಗಲಿ ಎಂದು ಶಬರಿಮಲೈ ಅಯ್ಯಪ್ಪಸ್ವಾಮಿಗೆ ಹರಕೆ ಹೊತ್ತ ಅಭಿಮಾನಿ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 11 : ಪ್ರತಾಪ್ ಗೌಡ ಪಾಟೀಲ್ ಮತ್ತೊಮ್ಮೆ ಶಾಸಕರಾಗಲಿ ಎಂದು ಯುವಕನೋರ್ವ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ಸನ್ನಿಧಿಯವರೆಗೆ ಪ್ರತಾಪ್ ಗೌಡ ಪಾಟೀಲ್ 
ರವರ ಫೋಟೋ ಹಿಡಿದು ಹರಕೆ ಹೊತ್ತಿದ್ದಾರೆ.

ಪಟ್ಟಣದ ಸುರೇಶ್ ಪತ್ತಾರ ಎಂಬುವ ಯುವಕ ಬಿಜೆಪಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ರವರು ಮತ್ತೊಮ್ಮೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾಗಲಿ ಎಂದು ಅಯ್ಯಪ್ಪ ಸ್ವಾಮಿಮಾಲೆ ಧರಿಸಿ 48 ದಿನಗಳ ಹರಕೆ ಹೊತ್ತು ಶಬರಿಮಲೈಯ ಅಯ್ಯಪ್ಪ ಸ್ವಾಮಿ ಸನ್ನಿಧಿಯವರೆಗೆ ಪ್ರತಾಪ್ ಗೌಡ ಪಾಟೀಲ್ 
ರವರ ಫೋಟೋ ತೆಗೆದುಕೊಂಡು ಹೋಗುವ ಮೂಲಕ ಅಭಿಮಾನ ಮೆರೆದಿದ್ದಾರೆ.

Post a Comment

Previous Post Next Post