UDAYAVANI NEWS
ಮಾನ್ವಿ, ಜನವರಿ 12 : ಪಟ್ಟಣದ ಗಾಂಧಿಸ್ಮಾರಕ ಅನುದಾನಿತ ಶಾಲೆಯಲ್ಲಿರುವ ೩ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಂದ್ರಶೇಖರನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿ ಮತದಾರರಿಗೆ ರ‍್ಯಾಂಪ್ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕೋನಾಪುರ ಪೇಟೆಯ ಸರಕಾರಿ ಶಾಲೆಯಲ್ಲಿನ ಮತಗಟ್ಟೆಯನ್ನು ದಾರಿಗೆ ಹತ್ತಿರವಿರುವ ಶಾಲೆಯ ಕೋಠಡಿಗೆ ಸ್ಥಳಾಂತರಿಸುವಂತೆ ಸೂಚಿಸಿ ಶೌಚಾಲಯ ವ್ಯವಸ್ಥೆ ಪರಿಶೀಲನೆ ನಡೆಸಿದರು. ಮತಗಟ್ಟೆಗಳಲ್ಲಿ ಮತದಾನ ಮಾಡುವುದಕ್ಕೆ ಅನುಕೂಲವಾಗುವಂತೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಸಾಲುಗಳಲ್ಲಿ ನಿಲ್ಲುವುದಕ್ಕೆ ಅಗತ್ಯವಾದ ಸೌಲಭ್ಯ ಕಲ್ಪಿಸಬೇಕು ವಿಶೇಷ ಚೇತನರು ಮತಚಲಾಯಿಸುವುದಕ್ಕೆ ರ‍್ಯಾಂಪ್‌ಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ನಂತರ ಪಟ್ಟಣದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಮಾತನಾಡಿ, ೫೫-ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೇಚ್ಚಿನ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ಮತಗಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ,ವಿದ್ಯುತ್ ಸಂಪರ್ಕ ,ಬೆಳಕಿನ ವ್ಯವಸ್ಥೆ ,ಮತಗಟ್ಟೆಗೆ ಹೋಗಲು ದಾರಿಯ ವ್ಯವಸ್ಥೆ ಇರುವ ಮತಗಟ್ಟೆಗಳನ್ನು ಆಯ್ಕೆ ಮಾಡಿ ಮತದಾರರಿಗೆ ಮತದಾನಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವಂತೆ ತಹಸೀಲ್ದಾರ್ ಚಂದ್ರಕಾಂತ್ .ಎಲ್.ಡಿ.ರವರಿಗೆ ಸೂಚಿಸಿದರು.
ಪಟ್ಟಣದ ವಿವಿಧ ಮತಗಟೆಗಳನ್ನು ವಿಕ್ಷೀಸಿ ಅಗತ್ಯವಾದ ಸೂಚನೆಗಳನ್ನು ನೀಡಿದರು.
ತಹಸೀಲ್ದಾರ್ ಚಂದ್ರಕಾಂತ್.ಎಲ್.ಡಿ.ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್, ತಾ.ಪಂ.ಇ.ಒ. ಎಂ.ಡಿ.ಸೈಯಾದ್ ಪಟೇಲ,ಪಿ.ಐ.ಮಹಾದೇವಪ್ಪ ಪಂಚಮುಖಿ, ಪ.ವರ್ಗಗಳ ಕಲ್ಯಾಣಾಧಿಕಾರಿ ಮಹಾಲಿಂಗಪ್ಪ ಇಂಗಳದಾಳ್,ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ .ಡಿ. ಚುನಾವಣ ಉಪತಹಸೀಲ್ದಾರ್ ವಿನಾಯಕ್ ರಾವ್, ಶಿಕ್ಷಕರ ಸಂಘದ ತಾ.ಅಧ್ಯಕ್ಷ ಸಂಗಮೇಶ ಮುಧೋಳ್ ,ಸೇರಿದಂತೆ ಇನ್ನಿತರರು ಇದ್ದರು.
Tags
ಜಿಲ್ಲಾ ಸುದ್ದಿಗಳು