ಗಾಲಿ ಜನಾರ್ದನ ರೆಡ್ಡಿ 56 ನೇ ಹುಟ್ಟು ಹಬ್ಬ : ಆಸ್ಪತ್ರೆ , ಕಾರುಣ್ಯಾಶ್ರಮಕ್ಕೆ ಹಾಲು ,ಹಣ್ಣು ವಿತರಣೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಸಿಂಧನೂರು,ಜನವರಿ 12 : ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಅವರ 56 ನೇ ಹುಟ್ಟು ಹಬ್ಬದ ನಿಮಿತ್ಯ ಅಭಿಮಾನಿಗಳು ,ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆ ,ಕಾರುಣ್ಯ ,ಪುನೀತ್ ವೃದ್ದ ಹಾಗೂ ಬುದ್ದಿ ಮಾಂದ್ಯಾಶ್ರಮಗಳಲ್ಲಿ ಆಸ್ಪತ್ರೆ ಯಲ್ಲಿನ ರೋಗಿಗಳಿಗೆ ,ಆಶ್ರಮಗಳಲ್ಲಿನ ಅಂಧ -ಅನಾಥ, ವೃದ್ದ ,ಬುದ್ಧಿಮಾಂದ್ಯತೆಯಯಳ್ಳವರಿಗೆ ರಡ್ಡಿ ಅಭಿಮಾನಿಗಳು ,ಕೆ.ಆರ್.ಪಿ.ಪಿ ಕಾರ್ಯಕರ್ತರು ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಬುಧವಾರ ಗಾಲಿ ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ಪ್ರಯುಕ್ತ ಕೆ.ಆರ್.ಪಿ.ಪಿ ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾದ ಮಲ್ಲಿಕಾರ್ಜುನ ನೆಕ್ಕಂಟಿ ನಗರದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ರೋಗಿಗಳಿಗೆ ಹಾಲು ,ಹಣ್ಣು ,ಬ್ರೆಡ್ ವಿತರಿಸಿ ನಂತರ ಸಿಂಧನೂರು ನಗರದ ಕಾರುಣ್ಯ ಹಾಗೂ ಪುನೀತ್ ಆಶ್ರಮ ಗಳಲ್ಲಿ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿ ವೃದ್ದರ ಆಶಿರ್ವಾದವನ್ನು ರೆಡ್ಡಿ ಯವರಿಗೆ ಸಿಗಲಿ ಎಂದು ಶುಭಕೊರಲಾಯಿತು.
ಪಕ್ಷದ ಕಛೇರಿ ಪ್ರಾರಂಭ : ತಾಲೂಕಿನ ಪಗಡದಿನ್ನಿ ಕ್ಯಾಂಪ್ ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಕಾರ್ಯಾಲಯವನ್ನು ಪ್ರಾರಂಭಿಸಿ ಇನ್ನೇನು ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ವಾಲಿಸುವ ಅವರ ಸಮಸ್ಯೆಗಳನ್ನು ಆಲಿಸಲು ನಿಗಧಿತ ಸ್ಥಳ ಬೇಕಾದ ಹಿನ್ನೆಲೆಯಲ್ಲಿ ಕಛೇರಿಯನ್ನು ಪ್ರಾರಂಭಿಸಲಾಯಿತು ಇದೇ ಸಂದರ್ಭದಲ್ಲಿ ಹಲವಾರು ಯುವಕರು ಪಕ್ಷಕ್ಕೆ ಸೇರ್ಪಡೆಯಾದರು.
ಕಾರುಣ್ಯಾಶ್ರಮ ಗೌರವ ಅಧ್ಯಕ್ಷರಾದ ಶರಣು, ಆಡಳಿತಾಧಿಕಾರಿ ಚನ್ನಬಸಯ್ಯ ಸ್ವಾಮಿ , ಕರಿಯಪ್ಪ ಅರಗಿನಮರ ಕ್ಯಾಂಪ್ ,ಮುತ್ತು ಪಾಟೀಲ ,ಪಂಪಯ್ಯ ಸ್ವಾಮಿ ,ಮಹೇಶ ,ಸುರೇಶ ಬಂಡಿ ,ಸಾಯಿಕುಮಾರ,ರವಿ ರಡ್ಡಿ,ಯಶವಂತ ರಡ್ಡಿ ,ಕಿರಣಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.

Post a Comment

Previous Post Next Post