UDAYAVANI NEWS
ಮಸ್ಕಿ, ಜನವರಿ 14 : ಪಟ್ಟಣಕ್ಕೆ ಉಪನೋಂದಣಿ ಕಛೇರಿ ಮಂಜೂರು ಮಾಡಬೇಕು ಎಂದು ಕನ್ನಡ ಸೇನೆ ಕರ್ನಾಟಕ ತಾಲೂಕ ಘಟಕ ವತಿಯಿಂದ
ಆರ್.ಅಶೋಕ ಕಂದಾಯ ಸಚಿವರು ಕರ್ನಾಟಕ ಸರಕಾರ ವಿಧಾನಸೌಧ ಬೆಂಗಳೂರು
ಇವರಿಗೆ ಮಸ್ಕಿ ತಹಶೀಲ್ ಕಾರ್ಯಾಲಯದ
ಮುಖಾಂತರ ಮನವಿಯನ್ನು ಸಲ್ಲಿಸಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಮಲ್ಲಿಕ್ ಕೊಠಾರಿ ಮಾತನಾಡಿಮಸ್ಕಿ ಪಟ್ಟಣವನ್ನು ಲಿಂಗಸಗೂರು ಮಾನ್ವಿ ಸಿಂಧನೂರು ಮೂರು ತಾಲೂಕಗಳನ್ನೊಳಗೊಂಡು 2018 ರಲ್ಲಿ ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿದೆ ನೂತನ ತಾಲೂಕಿಗೆ 5 ಹೋಬಳಿ 144 ಹಳ್ಳಿಗಳನ್ನು ಒಳಗೊಂಡಿದೆ ಪಕ್ಕದ ನೂತನ ಸಿರವಾರ ತಾಲೂಕಿಗೆ ಉಪ ನೋಂದಣಿ ಕಛೇರಿ ಮಂಜೂರು ಮಾಡಿ ಮಸ್ಕಿ ತಾಲೂಕಿಗೆ ಮಂಜೂರು ಮಾಡದೇ ಮಲತಾಯಿ ಧೋರಣೆ ಮಾಡಿರುವುದು ಖಂಡನಿಯ ಆದ್ದರಿಂದ ಮಸ್ಕಿ ಪಟ್ಟಣದಲ್ಲಿ ಕೂಡಲೇ ಉಪ ನೋಂದಣಿ ಕಛೇರಿಯನ್ನು ಮಂಜೂರು ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ. ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಶಬ್ಬೀರ್ ನಗರ ಘಟಕ ಅಧ್ಯಕ್ಷರು,ಕಾರ್ಯದರ್ಶಿಯಾದ ರಿಯಾಜ್, ದಶರಥ,ಸದಸ್ಯರುಗಳಾದ ಮೌನೇಶ್ ಮುರಾರಿ, ಹುಲಿಗೇಶ್ ಕೊಠಾರಿ, ಆಶೀಫ್, ರಂಜಿತ್ ಮುರಾರಿ,ಸೇರಿದಂತೆ ಇನ್ನಿತರೇ ಪದಾಧಿಕಾರಿಗಳು,
ಇದ್ದರು.
Tags
ಜಿಲ್ಲಾ ಸುದ್ದಿಗಳು