UDAYAVANI NEWS
ಯಲಬುರ್ಗಾ,ಜನವರಿ 14 : ಜನಸಾಮಾನ್ಯರು ಸರಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆಥಿ೯ಕವಾಗಿ ಸದೃಢವಾಗಬೇಕೆಂದು ತಾ.ಪಂ ಇಓ ಸಂತೋಷ ಬಿರಾದಾರ ಪಾಟೀಲ್ ಹೇಳಿದರು.
ಇಲ್ಲಿನ ತಾ.ಪಂ ಸಾಮರ್ಥ್ಯಸೌಧ ತರಬೇತಿ ಕೇಂದ್ರದಲ್ಲಿ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೈಸೂರು ಮತ್ತು ಸಕಾ೯ರಿ ಕಾನೂನು ನ್ಯಾಯ ಸೇವಾ ಇಲಾಖೆ ನವದೆಹಲಿ ಇವರು ಸಹಯೋಗದಲ್ಲಿ ಜಿಲ್ಲಾ ಮಟ್ಟದ ಆಯ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮತ್ತು ಸಮುದಾಯಕ್ಕೆ ಕಾನೂನು ಅರಿವು ಮೂಡಿಸುವ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ವಕೀಲರಾದ ಮಹಾಂತೇಶ ಬೂದಗುಂಪ ಮಾತನಾಡಿ ಬಾಲ್ಯ ವಿವಾಹ ಕಾಯ್ದೆ- 2006 ಪ್ರಕಾರ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಬಗ್ಗೆ ಜಾಗೃತಿ,ತಡೆಗಟ್ಟುವ ಎಲ್ಲಾ ರೀತಿಯ ನೆರವನ್ನು ಒದಗಿಸುವುದು. ಬಾಲ್ಯ ವಿವಾಹದಲ್ಲಿ ಭಾಗವಹಿಸಿದ ಎಲ್ಲಾರಿಗೂ 2 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಮತ್ತು ಅಪ್ರಾಪ್ತ ಹೆಣ್ಣು ಮಕ್ಕಳು ರಕ್ಷಣೆಗೆ ಪೋಕ್ಸೋ ಕಾಯ್ದೆ 2012 ಬಾಲ್ಯ ನ್ಯಾಯ ಕಾಯ್ದೆ-2016 ಇವುಗಳ ಕಾನೂನನ್ನು ಪ್ರತಿಯೊಬ್ಬರೂ ಅರಿತುಕೊಂಡು, ಪಾಲಿಸಿದಾಗ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಕುದರಿ ರವರು ವರದಕ್ಷಿಣೆ ಕಿರುಕುಳ ಹಾಗೂ ನಿಷೇಧ ಅಧಿನಿಯಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ವಿ.ಕೆ.ಬಡಿಗೇರ.ಎ ಎಸ್ ಐ ಬಸವರಾಜ, ಸ.ತಾ.ಯೋಜನಾಧಿಕಾರಿ ಉದಯಕುಮಾರ್, ತರಬೇತಿ ಸಂಪನ್ಮೂಲ ವ್ಯಕ್ತಿ ಭೀಮಪ್ಪ ಹವಳಿ,ವಿಷಯ ನಿವಾ೯ಹಕ ಬಸವರಾಜ ಪಾಟೀಲ್, ಪಿಡಿಓ ಚನ್ನಬಸವನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು