ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಮ್ಯಾರಥಾನ್ ಓಟ ಸ್ಪರ್ಧೆ ಆಯೋಜನೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 14 : ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ,
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಆಯೋಜನೆ ಮಾಡಲಾಯಿತು ಈ ಕಾರ್ಯಕ್ರಮವನ್ನು ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಪ್ರತಾಪ್ ಪಾಟೀಲ್ ಅವರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ನಂತರ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್ ಮಾತನಾಡಿ ನಾಡಿನ ಸಮಸ್ತ ಯುವ ಜನತೆಗೆ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನಮ್ಮ ದೇಶ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಇವರ ಹೆಸರು ಕೇಳಿದ ತಕ್ಷಣ ನಮಗೆ ನೆನಪಿಗೆ ಬರುವುದು ಅವರು ನಮ್ಮ ದೇಶದ ಯುವ ಜನತೆಯ ಕುರಿತು ಹೇಳಿದ ಆ ಒಂದು ಮಾತು, "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ", ಈ ಮಾತು ನಮ್ಮ ದೇಶದ ಬಹುತೇಕ ಯುವಕರ ಮೇಲೆ ಪರಿಣಾಮ ಬೀರಿದೆ. ಇಂತಹ ಜಗದ್ವಿಖ್ಯಾತರಾದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ದಂದು ನಾಡಿನ ಸಮಸ್ತ ಯುವ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಸ್ವಾಮಿ ವಿವೇಕಾನಂದರು ನಮ್ಮ ದೇಶ ಕಂಡ ಹೆಮ್ಮೆಯ ಪುತ್ರರು. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಶಾಶ್ವತ. ಅವರ ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ ಹಾಗೂ ಅವರ ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಇದೇ ಕಾರಣಕ್ಕೆ ಈ ವೀರ ಸನ್ಯಾಸಿಯ ಜನ್ಮದಿನವನ್ನು " ರಾಷ್ಟ್ರೀಯ ಯುವ ದಿನ"ವನ್ನಾಗಿ ಆಚರಿಸಲಾಗುತ್ತಿದೆ
ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ, ಸಮಾನತೆಯ ಮೇಲೆ ನಿಂತಿರುವ ಸಮಾಜ. ಯಾವುದೋ ಒಂದು ವರ್ಗದ ಪ್ರಾಶಸ್ತ್ಯ, ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಠಿಕೋನವಾಗಿತ್ತು. ಇಂತಹ ಮಹಾನ್ ಸಂತರಾದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದಂದು ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತಾ, ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಹಾಗೆಯೇ ಅವರ ಜೀವನದ ಆಶಯಗಳನ್ನು ನಿಮ್ಮ ಜೀವನಕ್ಕೂ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ನಂತರ ಓಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ,ಯುವ ಮೋರ್ಚಾ ಅಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಶರಣಬಸವ ಸೊಪ್ಪಿಮಠ, ಬಿಜೆಪಿ ಯುವ ಮುಖಂಡರಾದ ಪ್ರಸನ್ನ ಪಾಟೀಲ್, ಖ್ಯಾತ ವೈದ್ಯರಾದ ಡಾಕ್ಟರ್ ಮಲ್ಲಿಕಾರ್ಜುನ್ ಇತ್ಲಿ, ಪಕ್ಷದ ಪದಾಧಿಕಾರಿಗಳಾದ ಶರಣಯ್ಯ ಗುಡದೂರು, ವಿನಾಯಕ್ ಪಾಟೀಲ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ್ ಕಂಬಳಿಮಠ, ಮಹೇಶ್ ಮಟ್ಟೂರು, ಮಾಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ ಯಂಬಲದ, ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಮಲ್ಲಿಕಾರ್ಜುನ್ ಬ್ಯಾಳಿ,ಮಲ್ಲಯ್ಯ ಅಂಬಾಡಿ, ಭರತ್ ಕುಮಾರ್, ಮೌನೇಶ್ ನಾಯಕ್, ಶಿವಪ್ರಸಾದ್ ಕ್ಯಾತನಹಟ್ಟಿ, ಹನುಮಂತ ಉಪ್ಪಾರ್, ಕಾಶಿಮ್ ಮುರಾರಿ, ಶ್ರೀಕಾಂತ್ ಮುರಾರಿ ಅಮರೇಶ್ ಸುಂಕದ, ಶರಣಬಸವ ಹರಿವಿ,ಅಮರೇಶ್ ಮಾಟೂರು, ಶರಣೇಗೌಡ ಪೊಲೀಸ್ ಪಾಟೀಲ್, ಹಾಗೂ ದೈಹಿಕ ಶಿಕ್ಷಕರು ಶಿವಪ್ಪ ಹಸಕಲ್ , ಮೋಹನ್ , ಜಾಫರ್ ಮಿಯಾ, ಪಕ್ಷದ ಪದಾಧಿಕಾರಿಗಳು ಹಾಗೂ ಓಟದ ಸ್ಫರ್ಧೆಯಲ್ಲಿ ಯುವಕರು ಪಾಲ್ಗೊಂಡಿದ್ದರು.

Post a Comment

Previous Post Next Post