UDAYAVANI NEWS
ಮಸ್ಕಿ,ಜನವರಿ 13 : ತಾಲೂಕಿನ ಬಳಗಾನೂರ ಪಟ್ಟಣದ ವಾರ್ಡ್ ನಂ - 07 ಬಸವೇಶ್ವರ ನಗರದ ಶಿವರಾಜ ಲೇಔಟ್ ನಲ್ಲಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆ ಯಿಂದಾಗ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದಿದೆ. ಎಂದು ಮುಖ್ಯಾಧಿಕಾರಿ ಮೇಲೆ ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ ಬಳಗಾನೂರ ಪತ್ರಿಕೆಯ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಬಳಗಾನೂರ ಪಟ್ಟಣದ ವಾರ್ಡ್ ನಂ - 07 ಬಸವೇಶ್ವರ ನಗರದ ಶಿವರಾಜ ಲೇಔಟ್ ನಲ್ಲಿ ಸಾರ್ವಜನಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಸ್ಥಳದಲ್ಲಿ ಪಟ್ಟಣ ಪಂಚಾಯಿತಿಯ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸುಮಾರು ಐದು ಲಕ್ಷ ಐವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವನ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆ ಯಿಂದಾಗ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದಿದೆ ಎಂದು ದಲಿತ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ ಬಳಗಾನೂರ ಮುಖ್ಯಾಧಿಕಾರಿಗಳ ಮೇಲೆ ಕಿಡಿಕಾರಿದರು.
ಬಸವೇಶ್ವರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಇಲ್ಲಿವಾಸಿಸುವ ಅಸಂಖ್ಯಾತ ನಿವಾಸಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಲಕ್ಷಾಂತರ ರೂಪಾಯಿ ಹಣ ಸರ್ಕಾರ ಬಿಡುಗಡೆ ಮಾಡಿದ್ದರೂ ಸಹಿತ ಇದನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸದ್ಭಳಕೆ ಮಾಡದೇ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿಗಳು ಕಾಳಜಿವಹಿಸಿ ಸರಿಯಾಗಿ ಉಪಯೋಗ ಮಾಡದೇ ಇರುವುದರಿಂದ ಬಳಗಾನೂರ ಅಭಿವೃದ್ಧಿ ಮರೀಚಿಕೆ ಯಾಗಿದೆ ಎಂದರು. ನಿರುಪಯುಕ್ತವಾಗಿ ಬಿದ್ದಿರುವ ಉದ್ಯಾನವನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕರಿಗೆ ನಮ್ಮ ಸಂಘಟನೆಯ ವತಿಯಿಂದ ಪತ್ರ ಬರೆದಿದ್ದೇನೆ ಆ ವಾರ್ಡಿನಲ್ಲಿ ಅಂಗನವಾಡಿ ಸಮಸ್ಯೆ ಇದ್ದುದರಿಂದ ಶೀಘ್ರವೇ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸಂಭಂಧ ಪಟ್ಟ ಇಲಾಖೆಯ ಬಳಿ ಮಾಹಿತಿ ಪಡೆದು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ದಲಿ ಸಂರಕ್ಷ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಬಿ. ಮೌನೇಶ ಬಳಗಾನೂರ ಇವರು ಮಸ್ಕಿ ಕ್ಷೇತ್ರದ ಶಾಸಕ ಆರ್ ಬಸನಗೌಡ ತುರುವಿಹಾಳ ರವರಲ್ಲಿ ಪತ್ರಿಕೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Tags
ಜಿಲ್ಲಾ ಸುದ್ದಿಗಳು