ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 09 : ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯ ತುಗ್ಗಲದಿನ್ನಿಯಲ್ಲಿ ಫೆಬ್ರವರಿ 8,9 ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜನ ಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ತೋರಣದಿನ್ನಿ ಜಿಲ್ಲಾ ಪಂಚಾಯತ ಮಟ್ಟದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವದ ಉಸ್ತುವಾರಿ ಗಳಾದ ಸಿದ್ದಾರ್ಥ ಪಾಟೀಲ್ ಗ್ರಾಮದ ಸಮಾಜ ಬಾಂಧವರಿಗೆ ಕರೆ ನೀಡಿದರು.

ತೋರಣದಿನ್ನಿ ಜಿಲ್ಲಾ ಪಂಚಾಯತ ಮಟ್ಟದಲ್ಲಿ ಬರುವ ಹಾಲಾಪೂರ, ತೋರಣದಿನ್ನಿ, ಹಿರೇದಿನ್ನಿ,ಮಲ್ಲದಗುಡ್ಡ, ಪಾಮನಕಲ್ಲೂರು, ಅಮೀನಗಡ,ವಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಫೆಬ್ರವರಿ 8,9 ರಂದು ನಡೆಯಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿ ಯಲ್ಲಿ ಐತಿಹಾಸಿಕವಾದ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಲಿದ್ದು,ಅದಕ್ಕೆ ಸಮಾಜದ ಬಾಂಧವರು ತನು ಮನ ಧನ ದೊಂದಿಗೆ ಸೇವೆ ಮಾಡುವುದರೊಂದಿಗೆ ಐತಿಹಾಸಿಕವಾಗಿ ನಡೆಯುವ ಜಾತ್ರೆಯಲ್ಲಿ ಆಗಮಿಸಿ ಬೇಕು, ಹಾಗೇಯೇ ಎರಡು ದಿನ ನಡೆಯುವ ಜಾತ್ರೆಯಲ್ಲಿ ವಿಶೇಷವಾಗಿ ಸಮಾಜದ ಬಗ್ಗೆ ಅನೇಕ ವಿಷಯಗಳ ಚರ್ಚೆ, ವಿವಿಧ ವೇಷಭೂಷಣ, ಕಲಾ ತಂಡಗಳು, ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿ ಪ್ರಧಾನ , ಬೃಹತ್ ಮಟ್ಟದ ನೂತನ ಮಹಾ ರಥೋತ್ಸವ ಇದೆ ವರ್ಷ ಜರಗುತ್ತದೆ ಹಾಗೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ ಹೀಗಾಗಿ ಈ ಒಂದು ಐತಿಹಾಸಿಕ ಜನ ಜಾಗೃತಿ ಜಾತ್ರೆಯಲ್ಲಿ ರಾಜ್ಯ ಮತ್ತು ದೇಶದ ಅನೇಕ ಸಮಾಜದ ಬಾಂಧವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ ಹೀಗಾಗಿ ತಾವುಗಳು ಭಾಗವಹಿಸಬೇಕೆಂದು ಸಿದ್ದಾರ್ಥ ಪಾಟೀಲ್ ಹಾಲಾಪೂರ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ತೋರಣದಿನ್ನಿ ಜಿಲ್ಲಾ ಪಂಚಾಯತ ಉಸ್ತುವಾರಿ ರವರು ತುಗ್ಗಲದಿನ್ನಿ ಗ್ರಾಮದ ಸಮಾಜ ಬಾಂಧವರಿಗೆ ಹೇಳಿದರು. ಈ ಸಂದರ್ಭದಲ್ಲಿ ಬಸವರಾಜ ನಾಯಕ ತುಗ್ಗಲದಿನ್ನಿ , ತುಗ್ಗಲದಿನ್ನಿ ಗ್ರಾಮಸ್ಥರು ಇದ್ದರು.

Post a Comment

Previous Post Next Post