ಇಳಕಲ್ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬಾಗಲಕೋಟೆ, ಜನವರಿ 09 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಳಕಲ್ ಶಾಖೆಯ ವತಿಯಿಂದ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ತಹಶಿಲ್ದಾರರ ಕಚೇರಿಯ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ವಹಿಸಿದ್ದರು.
ಕ್ಯಾಲೆಂಡರ್ ಬಿಡುಗಡೆಯನ್ನು ಇಳಕಲ್ ತಾಲ್ಲೂಕು ತಹಶಿಲ್ದಾರರಾದ ಶ್ರೀ ಬಸವರಾಜ ಮೇಳವಂಕಿ ರವರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಂಜೀವ ಜುನ್ನೂರ,ನಗರಸಭೆಯ ಪೌರಾಯುಕ್ತರಾದ ಶ್ರೀ ರಾಮಕೃಷ್ಣ ಸಿದ್ದನಕೊಳ್ಳ ರವರು ಮಾಡಿದರು.

ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ತಹಶಿಲ್ದಾರರಾದ ಬಸವರಾಜ ಮೆಳವಂಕಿ ರವರು ಇಂತಹ ಕಾರ್ಯಕ್ರಮಗಳು ಸಂಘಟನೆಯ ನೈಜ‌ ಜೀವಂತಿಕೆಯನ್ನು ತೋರಿಸುತ್ತೇವೆ ಈ ನಿಟ್ಟಿನಲ್ಲಿ ತಾಲ್ಲೂಕು ಶಾಖೆಯ ಕಾರ್ಯ ಶ್ಲಾಘನೀಯ ಹಾಗೂ ನೌಕರರ ಸಂಘದ ಒತ್ತಡದಿಂದ ಅನೇಕ ಬೇಡಿಕೆಗಳು ಈಡೇರಿವೆ ಎಂದರು ಹಾಗೂ ಎನ್‌ಪಿಎಸ್ ರದ್ದತಿಗಾಗಿ ಹೋರಾಟವು ಇನ್ನಷ್ಟು ತೀವ್ರವಾಗಿ ಜರುಗಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ತಾ ಪಂ ಇಓ ರವರಾದ ಶ್ರೀ ಸಂಜೀವ ಜುನ್ನೂರ ರವರು ತಾಲ್ಲೂಕು ಶಾಖೆಯು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಈ ನಿಟ್ಟಿನಲ್ಲಿ ಯಾವುದೇ ಬೇಡಿಕೆಗಳ ಈಡೇರಿಕೆಗೆ ಸಂಘಟನೆಯ ಪಾತ್ರ ಬಹು ಪ್ರಮುಖವಾಗಿದೆ ಎಂದರು.
ತದನಂತರ ಮಾತನಾಡಿದ ಪೌರಾಯುಕ್ತರಾದ ರಾಮಕೃಷ್ಣ ಸಿದ್ದನಕೊಳ್ಳ 2023 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡುವುದಕ್ಕೆ ತುಂಬಾ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಶುರಾಮ ಪಮ್ಮಾರ ಸಂಘಟನೆಯು 102 ವರ್ಷಗಳ ಇತಿಹಾಸವನ್ನು ಹೊಂದಿದ್ದು ಸಮಗ್ರ ಸರ್ಕಾರಿ ನೌಕರರ ಅಸ್ಮಿತೆಯನ್ನು ಕಾಪಾಡುವುದರೊಂದಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದೆ ಎಂದರು ಹಾಗೂ ಎನ್‌ ಪಿ ಎಸ್ ರದ್ದತಿಗಾಗಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಶಾಖೆಗೆ ನೂತನ‌ ಪದಾಧಿಕಾರಿಗಳಾಗಿ ಕಂದಾಯ ಇಲಾಖೆಯಿಂದ ಶಂಕರ‌ ಲಮಾಣಿ,ಶರಣಗೌಡ ಬಿರಾದಾರ,ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಈರಣ್ಣ ಚಿನಿವಾಲರ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಂಗನಗೌಡ ನಾಡಗೌಡ ಹಾಗೂ ಆರೋಗ್ಯ ಇಲಾಖೆಯಿಂದ ಶ್ರೀಮತಿ ಉಮಾ ಮಾರಾ ರವರನ್ನು ತಾಲ್ಲೂಕು ಅಧ್ಯಕ್ಷರು ನೇಮಕ‌ ಮಾಡಿ ಪ್ರಮಾಣಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಖಜಾಂಚಿ ಎಂ ಎಚ್ ಗೌಡರ,ಕಾರ್ಯದರ್ಶಿ ಗುಂಡಪ್ಪ ಕುರಿ, ಗೌರವಾಧ್ಯಕ್ಷ ಎಸ್ ಎನ್ ಗಡೇದ,ಹಿರಿಯ ಉಪಾಧ್ಯಕ್ಷ ಈಶ್ವರ ಹುದ್ದಾರ,ಪದಾಧಿಕಾರಿಗಳಾದ‌ ಎಂ ಪಿ ಗೋಟೂರ,ಎಸ್ ವಿ ಹಿರೇಮಠ,ಎಂ ಎಸ್ ಬೀಳಗಿ,ಶಂಕರ ಖತ್ರಿ,ಎಸ್ ಜಿ ಬಂಗಾರಿ,ಎಸ್ ಎಸ್ ರೇಶ್ಮೀ,ಶೋಭಾ ಸಂಕದಾಳ,ಎಸ್ ಎಸ್ ಪತ್ತಾರ,ಪಿ ಎಚ್ ತಳವಾರ,ಎಸ್ ಎಸ್ ದರಗಾದ,ಬಿ ಕೆ ಕುಂಟೋಜಿ,ಜಿ ಟಿ ರಾಠೋಡ,ಎಸ್ ಎಸ್ ಯಾವಗಲ್ಲಮಠ,ಬಸವರಾಜ ಕಾಟಾಪೂರಮಠ,ಕುಬೇರ ಹೊಂಗಲ್,ವಿಜಯ ಗುಡಿಹಿಂದಿನ ಹಾಗೂ ಸರ್ವ ಇಲಾಖೆಯ ನೌಕರರು ಭಾಗವಹಿಸಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ಶಂಕರ‌ ಖತ್ರಿ,ಪ್ರಾರ್ಥನೆಯನ್ನು ಎಂ ಎಸ್ ಬೀಳಗಿ,ವಂದನಾರ್ಪಣೆಯನ್ನು ಶಂಕರ‌ ಲಮಾಣಿ ಹಾಗೂ ನಿರೂಪಣೆಯನ್ನು ಕಾರ್ಯದರ್ಶಿ ಗುಂಡಪ್ಪ ಕುರಿ ಮಾಡಿದರು.

Post a Comment

Previous Post Next Post