UDAYAVANI NEWS
ಮಸ್ಕಿ, ಜನವರಿ 10 : ತಾಲೂಕಿನ ಬೇಡರ ಕಾರಲಕುಂಟೆ ಹಾಗೂ ಅಂಕುಶದೊಡ್ಡಿ ಕ್ರಾಸ್ ಮಧ್ಯೆ ಮುಖಾಮುಖಿ ಭೀಕರ ಬೈಕ್ ಅಪಘಾತ ಇಬ್ಬರ ದುರ್ಮರಣ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು.
ಮೊಹಮ್ಮದ್ ಅಸ್ಲಾಂ ಹಾಗೂ ಇತರರು ಮಸ್ಕಿಯಲ್ಲಿ ಜರುಗಿದ ವಲಿಮಾ ಕಾರ್ಯಕ್ರಮ ಮುಗಿಸಿಕೊಂಡು ಲಿಂಗಸ್ಗೂರಿಗೆ ವಾಪಸ್ ಆಗುವಾಗ ಮಹಮ್ಮದ್ ಅಸ್ಲಾಂ ವಾಹನ ಸಂಖ್ಯೆ ಕೆ.ಎ-36 ಇ ಎಕ್ಸ್ -6515 ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಖಾಜಾಸಾಬ್ ಮತ್ತು ಇರ್ಫಾನ್ ಇವರನ್ನು ಕೂರಿಸಿಕೊಂಡು ಭಾರಿ ಸ್ಪೀಡ್ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿರುವುದರಿಂದ ಎದುರುಗಡೆ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಅಶೋಕ್ ಎಂಬಾತನು ಕೆ. ಎ 05 ಎಲ್ ಎಫ್ - 2245 ಸಂಖ್ಯೆಯ ಹಿಂಬದಿಯಲ್ಲಿ ಬಸಯ್ಯ ಎಂಬಾತನನ್ನು ಕೂರಿಸಿಕೊಂಡು ಭಾರಿ ವೇಗವಾಗಿ ಹಾಗೂ ನಿರ್ಲಕ್ಷ್ಯ ತನದಿಂದ ವಾಹನ ಚಲಾಯಿಸಿರುವುದರಿಂದ ಭಾನುವಾರ ಸಂಜೆ 6:15 ನಿಮಿಷದ ಸುಮಾರಿಗೆ ಮಸ್ಕಿ ಲಿಂಗಸ್ಗೂರು ರಸ್ತೆಯ ಬೇಡರ ಕಾರಲಕುಂಟೆ ಹತ್ತಿರ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿ ಭೇಟಿ ನೀಡಿದ ಪಿಎಎಸ್ಐ ಸಿದ್ದರಾಮ ಬಿದರಾಣಿ ಘಟನೆಯ ಬಗ್ಗೆ ಮಾಹಿತಿ ಪಡೆದು ಈ ಅಪಘಾತ ಇಬ್ಬರ ನಿರ್ಲಕ್ಷ್ಯ ತನದಿಂದ ಜರುಗಿದ್ದು, 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗೆಂದು ಲಿಂಗಸ್ಗೂರಗೆ ತೆರಳುತ್ತಿದ್ದ ಸಂದರ್ಭ ಸಂತೇಕೆಲ್ಲೂರು ಬಳಿ ಮಹಮ್ಮದ್ ಅಸ್ಲಾಂ ಸಾವನ್ನಪ್ಪಿದ್ದು,ಕಸಬಾ ಲಿಂಗಸ್ಗೂರು ಬಳಿ ಅಶೋಕ್ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ವಿನಂತಿಸಿ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಸ್ಕಿ ಠಾಣೆಯ ಮೂಲಗಳು ಮಾದ್ಯಮಕ್ಕೆ ತಿಳಿಸಿವೆ.
Tags
ಜಿಲ್ಲಾ ಸುದ್ದಿಗಳು