UDAYAVANI NEWS
ಮಸ್ಕಿ, ಜನವರಿ 10 : ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಜರಗಿದ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ
ಪಿ.ಮೂರ್ತಿರವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ಪಟ್ಟಿ ಇವರ ನೇತೃತ್ವದಲ್ಲಿ ನೂತನ ತಾಲೂಕ ಸಮಿತಿ ರಚನೆ ಮಾಡಲಾಯಿತು.
ಪಟ್ಟಣದ ಹೊರ ವಲಯದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರಾದ ಪಿ.ಮೂರ್ತಿರವರ ಆದೇಶದಂತೆ ಜಿಲ್ಲಾಧ್ಯಕ್ಷ ವಿಶ್ವನಾಥ್ ಪಟ್ಟಿ ಇವರ ನೇತೃತ್ವದಲ್ಲಿ ಆದೇಶ ಹೊರಡಿಸಿ ನೇಮಕ ಮಾಡಿದರು.
ಮಸ್ಕಿ ತಾಲೂಕಿನ ಅಂಬೇಡ್ಕರ್ ಸೇನೆಯ ಗೌರವಾಧ್ಯಕ್ಷರಾಗಿ ಟಿ. ಮರಿಯಪ್ಪ ಮಟ್ಟೂರು, ತಾಲೂಕ್ ಅಧ್ಯಕ್ಷರಾಗಿ ಪರಶುರಾಮ ದೊಡ್ಡಮನಿ ಅಂಕುಶದೊಡ್ಡಿ, ತಾಲೂಕು ಉಪಾಧ್ಯಕ್ಷರಾಗಿ ಮರಿಯಪ್ಪ ಹೂವಿನಭಾವಿ, ಪ್ರಧಾನ ಕಾರ್ಯದರ್ಶಿಯಾಗಿ ಮರಿಯಪ್ಪ ಪಿ ಮಟ್ಟೂರು, ಖಜಾಂಚಿಯಾಗಿ ಸಿದ್ದರಾಮಪ್ಪ ಮೂಲಿಮನಿ, ಸಂಘಟನಾ ಕಾರ್ಯದರ್ಶಿ ವಿಜಯ ಕಾಟಗಲ್, ಬಸವರಾಜ್ ಡಬ್ಬೇರ್ ಮಡು, ಮಲ್ಲಪ್ಪ ಬುದ್ದಿನ್ನಿ. ಎಸ್, ಜಂಟಿ ಕಾರ್ಯದರ್ಶಿಯಾಗಿ ಹನುಮಂತ ಬೆನಕನಾಳ, ಸಂಘಟನಾ ಕಾರ್ಯಕರ್ತರಾದ ಅರಳಪ್ಪ ಮುದ್ಬಾಳ್, ದುರುಗಪ್ಪ ಅಂಕುಶದೊಡ್ಡಿ, ಶಿವರಾಜ ಹೂಗಾರ್ ಮಟ್ಟೂರ್, ರಮೇಶ ಬುದ್ದಿನ್ನಿ.ಎಸ್, ಮಲ್ಲಯ್ಯ ಶಾಸ್ತ್ರಿ ಮಟ್ಟೂರು, ಬಸವರಾಜ ನಂದವಾಡಗಿ ಮಟ್ಟೂರು, ಮಂಜುನಾಥ ಮ್ಯಾಗೇರಿ, ಹನುಮಂತ ಯಲಗಟ್ಟಿ, ಪರಶುರಾಮ್ ಕೊಡ್ಲಿ ಅಂಬೇಡ್ಕರ್ ಸೇನೆಯ ನೂತನ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು.
Tags
ಜಿಲ್ಲಾ ಸುದ್ದಿಗಳು