UDAYAVANI NEWS
ಮಸ್ಕಿ, ಜನವರಿ 10 : ನಮ್ಮ ಸಿಬ್ಬಂದಿಗಳು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯಕ್ಕೆ ಕ್ರೀಡೆ, ವ್ಯಾಯಾಮ, ಪ್ರಾಣಾಯಾಮ ಹಾಗೂ ದೈಹಿಕ ಕಸರತ್ತು ಮಾಡಬೇಕು,ಎಂದು ಮಸ್ಕಿಯ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಅವರು ಸಿಬ್ಬಂದಿಗಳಿಗೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆಟದ ಮೈದಾನದಲ್ಲಿ ರವಿವಾರ ಗಣರಾಜ್ಯೋತ್ಸವ ಅಂಗವಾಗಿ ವಿದ್ಯುತ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ವಿದ್ಯುತ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು 24 ಗಂಟೆಗಳು ವಿದ್ಯುತ್ ಕೆಲಸದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ದೇಹಕ್ಕೆ ಸದೃಢತೆ ಕಾಯ್ದುಕೊಳ್ಳುವುದು ಅತ್ಯಗತ್ಯ, ಕೆಲಸದ ಮಧ್ಯೆ ನೆಮ್ಮದಿ ಶಾಂತಿ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯಕತೆ ವಾಗಿರುವುದರಿಂದ ಈ ಒಂದು ದಿನದ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ತಾಲೂಕಿನ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿ, ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಎಂದು ತಿಳಿಸಿದರು.
ಈ ವೇಳೆ ವೆಂಕಟೇಶ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಉಪ ವಿಭಾಗ ಮಸ್ಕಿ, ವೆಂಕಟೇಶ ಎ ಮಸ್ಕಿ, ಪ್ರಶಾಂತ ಮುರಾರಿ ವಿದ್ಯುತ್ ಗುತ್ತೇದಾರರು ಸಂಘದ ಅಧ್ಯಕ್ಷರು, ಜಯರಾಜ್ ಗುತ್ತಿಗೆದಾರರು,ವಿಜಯಕುಮಾರ್ ಕಾರ್ಯದರ್ಶಿಗಳು ವಿ.ಗು ಸಂಘ, ಪಂಪಣ್ಣ ಸೇಠ ಗೌರವ ಅಧ್ಯಕ್ಷರು ವಿ.ಗು ಸಂಘ ಮಸ್ಕಿ, ಜಮದಗ್ನಿ ಗೋನಾಳ ಸಂಘಟನಾ ಕಾರ್ಯದರ್ಶಿ ವಿ.ಗು ಸಂಘ, ಮಸ್ಕಿ ತಾಲೂಕಿನ ಶಾಖಾ ಅಧಿಕಾರಿಗಳಾದ ಮುರಳಿ ಕೃಷ್ಣ, ತಿರುಪತಿ, ಶ್ರೀಶೈಲ್ ಪಾಟೀಲ, ಅಮರದೇವ, ಮೈಬೂಬ, ರಾಜಶೇಖರ ಹಾಗೂ ಸಿಬ್ಬಂದಿ ವರ್ಗದವರು ಹಾಗೂ ವಿದ್ಯುತ್ ಗುತ್ತೇದಾರರು ಭಾಗವಹಿಸಿದ್ದರು.
Tags
ಜಿಲ್ಲಾ ಸುದ್ದಿಗಳು