UDAYAVANI NEWS
ಸಿಂಧನೂರು,ಜನವರಿ 07 : ಹನ್ನೆರಡು ವರ್ಷಗಳ ಕಾಲ ಕಾದು ತಾಳ್ಮೆಯಿಂದ ಕುಳಿತಿದ್ದೆ ಆದರೆ ಬಿಜೆಪಿ ಪಕ್ಷದವರು ನನ್ನನ್ನು ಸೇರಿಸಿಕೊಳ್ಳದ ಕಾರಣ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕಿದ್ದೆನೆಂದು ಮಾಜಿ ಸಚಿವರು ,ಕೆ.ಆರ್.ಪಿ.ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ಪಿಡಬ್ಲೂಡಿ ಕ್ಯಾಂಪ್ ನಿಂದ ಪ್ರಾರಂಭವಾದ ಬೈಕ್, ಆಟೋ ರ್ಯಾಲಿ ತುಂಬಾ ಅದ್ಧೂರಿಯಾಗಿ ಸಾಗಿ ಸ್ತ್ರೀ ಶಕ್ತಿ ಭವನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷದ ಬಾಗಿಲು ತೆರೆದಿದ್ದು ನನ್ನಿಂದ ಎನ್ನುವುದನ್ನು ಮರೆತಿದ್ದಾರೆ. ಹನ್ನೆರಡು ವರ್ಷಗಳ ಕಾಲ ಅಜ್ಞಾತ ವಾಸ ಅನುಭವಿಸಿದ್ದೇನೆ .ನಾನೇನು ಕೈಲಾಗದವನಲ್ಲ 2018 ರಲ್ಲಿಯೇ ಹೊಸ ಪಕ್ಷ ಕಟ್ಟುತ್ತಿದ್ದೆ ಇಳಿವಯಸ್ಸಿನಲ್ಲಿ ಯಡಿಯೂರಪ್ಪ ರವರನ್ನು ಈ ರಾಜ್ಯದ ಮುಖ್ಯಮಂತ್ರಿ ಮಾಡುತ್ತಿದ್ದಾರೆ ಅದಕ್ಕೆ ನಾನೇ ಅಡ್ಡಿಯಾದೆ ಎಂಬ ಅಪವಾದ ನನ್ನ ಮೇಲೆ ಬರಬಾರದೆಂಬ ಕಾರಣಕ್ಕಾಗಿ ಸುಮ್ಮನಿದ್ದೆ ಈಗ ಸಮಯ ಬಂತು ಎಂದರು.ಯಾವ ನಾಯಕರನ್ನು ನಂಬಿ ಹೊಸ ಪಕ್ಷ ಕಟ್ಟಿಲ್ಲ ಜನರನ್ನು ನಂಬಿ ಈ ಪಕ್ಷ ಕಟ್ಟಿದ್ದೆನೆ. ಇನ್ನೂ ಎರಡು ಮೂರು ದಿನಗಳಲ್ಲಿ ಪಕ್ಷದ ಕಛೇರಿ ಪ್ರಾರಂಭಿಸಿ ಇನ್ನೂ ಹತ್ತು - ಹದಿನೈದು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ, ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತೆನೆಂದರು.
ಬಿಜೆಪಿ ಯವರು ಮತ್ತೊಮ್ಮೆ ರೆಡ್ಡಿ ಮೇಲೆ ಸಿ.ಬಿ.ಐ ದಾಳಿ ಮಾಡಲಾಗುತ್ತದೆ ಎಂಬ ವಿಷಯ ಹಂಚುತ್ತಿದ್ದಾರೆ ಇನ್ನೂ ಹತ್ತು ಜನ್ಮ ಬಂದರೂ ನನ್ನ ಆಸ್ತಿ ಮುಟ್ಟುಗೋಲು ಹಾಕಲಾಗುವದಿಲ್ಲ ಎಂದರು ನನ್ನ ಕಾರಿನ ಡೀಸೆಲ್ ,ಖರ್ಚು ವೆಚ್ಚಗಳನ್ನು ಜನರೇ ನೋಡಿಕೊಳ್ಳುತ್ತಿದ್ದಾರೆ ಅಷ್ಟೊಂದು ಅಭಿಮಾನ ,ಪ್ರೀತಿ ತೊರಿಸುತ್ತಿದ್ದಾರೆಂದರು.
ನೀರಿನ ರಾಜಕಾರಣ : ಸಿಂಧನೂರಿನಲ್ಲಿ ಕೇವಲ ರೈತರಿಗೆ ನೀರು ಕೊಡಿಸುವ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಒಂದು ಅವಕಾಶ ಕೊಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇನೆ ನಾನೊಬ್ಬ ಸಾಮಾನ್ಯ ಕಾನ್ಸ್ಟೇಬಲ್ ಮಗ ಸಿಂಧನೂರು ಕ್ಷೇತ್ರದಾದ್ಯಂತ ಈಗಾಗಲೇ ಹನ್ನೆರಡು ಹಳ್ಳಿಗಳಲ್ಲಿ ಜನರನ್ನು ಬೇಟಿಯಾಗಿದ್ದೇನೆ ಜೆಡಿಎಸ್ ,ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ನಮ್ಮನ್ನು ಬೆಂಬಲಿಸಿ ಸಿಂಧನೂರನ್ನು ಮಾದರಿ ಕ್ಷೇತ್ರವನ್ನಾಗಿಸುತ್ತೆನೆಂದರು.
ಬಿಜಾಪುರ ಶ್ರೀಕಾಂತ್ ಬಂಡಿ ,ಲಿಂಗಸ್ಗೂರಿನ ಅಮರೇಶ ನಾಯಕ್ ಪಕ್ಷವನ್ನು ಸೇರ್ಪಡೆಯಾದರು.
ಮಲ್ಲಿಕಾರ್ಜುನ ನೆಕ್ಕಂಟಿ ಸೇರಿದಂತೆ ಪಕ್ಷ ಸೇರ್ಪಡೆ ಯಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು