ಇಮಾಡಪುರ ಬಸ್ ನಿಲ್ದಾಣದಲ್ಲಿ ಚರಂಡಿ ನೀರು

ಸುದ್ದಿ ಸಂಪಾದಕರು ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಕಾನ ಹೊಸಹಳ್ಳಿ, ಜನವರಿ 01 : ಸಮೀಪದ ಇಮಾಡಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕ ಸರ್ವಿಸ್ ರಸ್ತೆಯಪಕ್ಕದ ಲ್ಲಿ ಒಳ ಚರಂಡಿಯ ವ್ಯವಸ್ಥೆಯನ್ನು ಮಾಡದೇ ಇರುವ ಕಾರಣ ಗ್ರಾಮದಲ್ಲಿನ ಸಾರ್ವಜನಿಕರ ನಲ್ಲಿಯ ನೀರು ಹಾಗೂ ಕೊಳಚೆ ನೀರು ಸರ್ವಿಸ್ ರಸ್ತೆಯಲ್ಲಿ ಹರಿದು ಬಂದು ಸಾರ್ವಜನಿಕರ ಬಸ್ ನಿಲ್ದಾಣದ ಒಳಗಡೆಗೆ ನಿಂತು ದುರ್ನಾಥ ಬೀರಿದ್ದು ಸೊಳ್ಳೆಗಳ ತಾಣವಾಗಿದೆ. ಸಾರ್ವಜನಿಕರು, ಶಾಲಾ ಮಕ್ಕಳು ಬಸ್ಸಿಗಾಗಿ ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳುವಂತಿಲ್ಲ. ಹೆದ್ದಾರಿಯ ಪಕ್ಕದಲ್ಲಿ ನಿಂತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಆದಾಗಿನಿಂದಲೂ ಇಲ್ಲಿಯ ಪರಿಸ್ಥಿತಿ ಹಾಗೆ ಇದೆ ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿತ್ತು ಹಾಗೂ ಪತ್ರಿಕೆಗಳಲ್ಲಿ ಸಹ ಪ್ರಕಟಿಸಲಾಗಿತ್ತು ಆದರೂ ಕೂಡ ಪ್ರಯೋಜನವಾಗಿಲ್ಲ.ಕಾರಣ ಈ ಬಾರಿಯಾದರೂ ಈ ಪತ್ರಿಕೆ ವರದಿಯನ್ನು ನೋಡಿದ ತಕ್ಷಣ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಸರ್ವಿಸ್ ರಸ್ತೆಯ ಪಕ್ಕದಲ್ಲಿ ಒಳಚರಂಡಿ ನಿರ್ಮಾಣ ಮಾಡಿಸಿ ಸರ್ವಿಸ್ ರಸ್ತೆಯಲ್ಲಿ ಹರಿದು ಬರುವನೀರು ಬಸ್ ನಿಲ್ದಾಣದ ಒಳಗಡೆ ನಿಲ್ಲದಂತೆ ಒಳ ಚರಂಡಿಯ ಮೂಲಕ ಬೇರೆ ಕಡೆಗೆ ಹರಿದು ಹೋಗುವಂತೆ ಕಾಮಗಾರಿ ಮಾಡಿಸಿ ಅನುಕೂಲ ಮಾಡಿಕೊಡಬೇಕಾಗಿ ಗ್ರಾಮದ ಮೂರ್ತಿ ನಾಗರಾಜ, ಹನುಮಂತಪ್ಪ ವೆಂಕಟೇಶ. ಸೇರಿದಂತೆ ಸಾರ್ವಜನಿಕರು ಇಮದಾಪುರ ಗ್ರಾಮದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Post a Comment

Previous Post Next Post