ಗವಿಸಿದ್ದೇಶ್ವರ ಜಾತ್ರೆಗೆ ಮಸ್ಕಿ ಹಾಗೂ ವಿವಿಧ ಹಳ್ಳಿಯ ಜನತೆಯಿಂದ ತಯಾರಾಗ್ತಿವೆ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 02 : ದಕ್ಷಿಣ ಭಾರತ ಮಹಾ ಕುಂಬಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಈಗ ಕ್ಷಣ ಗಣನೇ ಆರಂಭವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಗಾಗಿ ಪಟ್ಟಣದ ಜನತೆ ರೊಟ್ಟಿ, ಶೇಂಗಾ ಹೋಳಿಗೆ ತಯಾರಿಯಲ್ಲಿ ತೊಡಗಿದ್ದಾರೆ. 


ಎಲ್ಲಿ ನೋಡಿದ್ರೂ ಪಟಪಟ..ಪಟಪಟ ಅನ್ನೋ ಶಬ್ದ. ಎಲ್ಲಿ ನೋಡಿದ್ರೂ ಹೆಂಗಳೆಯರು. ಕೆಲವರು ರೊಟ್ಟಿ ಬಡಿಯುತ್ತಿದ್ರೆ, ಹಲವರು ರೊಟ್ಟಿ ಬೇಯಿಸುತ್ತಿದ್ದಾರೆ. ನೂರಾರು ಮಹಿಳೆಯರು ಪಟ್ಟಣದ ಚೌಡೇಶ್ವರಿ ಭವನದಲ್ಲಿ ಒಂದೆಡೆ ಸೇರಿ ಸಾಮೂಹಿಕವಾಗಿ ರೊಟ್ಟಿ ಮತ್ತು ಶೇಂಗಾ ಹೋಳಿಗೆ ತಯಾರಿಸೋ ದೃಶ್ಯ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದೆ.
ದಕ್ಷಿಣ ಭಾರತದ ಕುಂಭಮೇಳ ಅಂತಾನೆ ಪ್ರಖ್ಯಾತಿ ಪಡೆದಿರೋ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಇದೇ ಜನವರಿ 08 ರಂದು ಗವಿಸಿದ್ದೇಶ್ವರ ರಥೋತ್ಸವ ನಡೆಯಲಿದೆ. ಅಂದು ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಜಾತ್ರೆಯ ವಿಶೇಷ ಅಂದ್ರೆ ಅಂದು ಆಗಮಿಸಿದ ಭಕ್ತರಿಗೆಲ್ಲಾ ರೊಟ್ಟಿ ಊಟ ಇರುತ್ತೆ.
ಹೀಗಾಗಿ ತಾಲ್ಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ರೊಟ್ಟಿ ತಯಾರಿ ಜೋರಾಗಿ ನಡೆದಿದೆ. ಅದ್ರಲ್ಲೂ ಮಸ್ಕಿ ತಾಲೂಕಿನ ವಿವಿಧ ಗ್ರಾಮ ಗಳಿಂದ ಬರೋಬ್ಬರಿ ಎಂಟು ಸಾವಿರ ಜೋಳದ ರೊಟ್ಟಿ ಹಾಗೂ ಶೇಂಗಾ ಹೋಳಿಗೆ ತಯಾರಿಸಲಾಗ್ತಿದೆ.ರೊಟ್ಟಿ ಮತ್ತು ಹೋಳಿಗೆ ತಯಾರಿಸಿ ಜಾತ್ರೆಗೂ ಮುನ್ನ ಶ್ರೀಮಠಕ್ಕೆ ಒಪ್ಪಿಸಿ ಬರ್ತಾರೆ.
ಉತ್ತರ ಕರ್ನಾಟಕ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರೋ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗ ನಾಲ್ಕು ಐದು ದಿನ ಬಾಕಿ ಉಳಿದಿದೆ. ಜಾತ್ರೆಗಾಗಿ ತಾಲ್ಲೂಕಿನಾದ್ಯಂತ ಸಡಗರ ಸಂಭ್ರಮ ಜೋರಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಸಾವಿರಾರು ರೊಟ್ಟಿ ಮತ್ತು ಹೋಳಿಗೆ ಮೂಲಕ ಭಕ್ತಿ ಸೇವೆ ಸಲ್ಲಿಸಿದ್ದಾರೆ.ಹಳ್ಳಿಗಳಲ್ಲಿ ಜನರು ಸ್ವಯಂ ಪ್ರೇರಿತವಾಗಿ ತಮ್ಮ ಭಕ್ತಿ ಸೇವೆ ಅರ್ಪಿಸಲು ತಮ್ಮ ತಮ್ಮ ಮನೆಗಳಲ್ಲಿ ರೊಟ್ಟಿ ಮತ್ತು ಶೇಂಗಾ ಹೋಳಿಗೆ ತಯಾರಿಕೆ ಮಾಡಿ ಅಜ್ಜನ ಮಠಕ್ಕೆ ಅರ್ಪಿಸಿ ತಮ್ಮ ಸೇವೆ ಅರ್ಪಿಸುತ್ತಾರೆ. ಗ್ರಾಮಸ್ಥರು ಇಲ್ಲವೇ ಹೋಬಳಿ ಪರವಾಗಿ ಗಾಡಿ ಮಾಡಿಕೊಂಡು ಅಜ್ಜನ ಸೇವೆಗೆ ಅಣಿಯಾಗುತ್ತಾರೆ.

Post a Comment

Previous Post Next Post