ಗ್ರಾ.ಪಂ ಮುಂಭಾಗ ಮುಂದುವರಿದ ಧರಣಿ ಸತ್ಯಾಗ್ರಹ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 01 : ತಾಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗ ಮೂಲಭೂತ ಸೌಕರ್ಯಗಳ ಕುರಿತು ಡಾಕ್ಟರ್. ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಯಿತು. ಬೇಡಿಕೆಗಳು ಜಾರಿಗೆ ತರಲು ಹಿಂದೇಟು ಆದ್ದರಿಂದ ಮುಂದುವರಿದ ಧರಣಿ ಸತ್ಯಾಗ್ರಹ.

ಹಾಲಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗ ಡಾಕ್ಟರ್. ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಗ್ರಾಮ ಪಂಚಾಯಿತಿಯ 14-15 ನೇ ಅನುದಾನ ಲಕ್ಷಾಂತರ ರುಪಾಯಿ ಹಣ ದುರ್ಬಳಕೆ. ಸಾರ್ವಜನಿಕರ ಮೂಲ ಸೌಕರ್ಯಗಳ ಬೇಡಿಕೆ ಇಟ್ಟು, ಆಡಳಿತದ ವಿರುದ್ಧ ಘೋಷಣೆ ಕೂಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಬೇಡಿಕೆಗಳು ಬೇಡಿಕೆಯಾಗಿಯೇ ಇರುವ ಕಾರಣವಾಗಿ ಧರಣಿಯನ್ನು ಮುಂದುವರೆಸಲಾಗಿದೆ.

ಇದೇ ಸಂದರ್ಭದಲ್ಲಿ


ಅಶೋಕ್ ನಂಜಲದಿನ್ನಿ ಜಿಲ್ಲಾಧ್ಯಕ್ಷರು, ಜಮದಗ್ನಿ ಗೋನಾಳ ತಾಲೂಕ ಅಧ್ಯಕ್ಷರು, ಮರಿಸ್ವಾಮಿ ಮುದಬಾಳ, ವೀರೇಶ್ ನಾಗರಬೆಂಚಿ, ಸುಭಾಷ್ ಹಿರೇ ಕಡಬೂರು ಹಾಲಾಪೂರ ಹೋಬಳಿ ಅಧ್ಯಕ್ಷರು,ಕುಮಾರ್ ಹಿರೇಮನಿ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋರಾಟ ನಿರತ ಗ್ರಾಮಸ್ಥರು ಇದ್ದರು.




Post a Comment

Previous Post Next Post