UDAYAVANI NEWS
ಮಸ್ಕಿ,ಜನವರಿ 24 : ಪಟ್ಟಣದ ಕೇಂದ್ರ ಶಾಲೆಯ ಮೈದಾನದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸ ಬೇಕೆಂದು ವಾರ್ಡ್ ಸಂಖ್ಯೆ 03 ರಲ್ಲಿನ ಸಾರ್ವಜನಿಕರು
ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ರಲ್ಲಿ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಶಾಲೆಯ ಆವರಣದಲ್ಲಿ ದಿನೇ ದಿನೇ ರಾತ್ರಿಯ ವೇಳೆ ಕುಡುಕರ ಹಾವಳಿ ಹೆಚ್ಚಾಗಿದ್ದು ಅಲ್ಲದೇ ದುಶ್ಚಟಕ್ಕೆ ಸೀಮಿತವಾದ ಪ್ರದೇಶವಾದಂತಾಗಿದೆ ಮತ್ತು ಕೆಲ ಕಿಡಿಗೇಡಿಗಳು ಮೈದಾನದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಮೈದಾನವು ಶೌಚಾಲಯವಾದಂತಾಗಿದೆ. ಆದ್ದರಿಂದ ದಯಾಳುಗಳಾದ ತಾವುಗಳು ಕೇಂದ್ರ ಶಾಲೆಯ ಮೈದಾನಕ್ಕೆ 250 ವ್ಯಾಟ್ ನ 6 ವಿದ್ಯುತ್ ದೀಪ ಗಳನ್ನು ಅಳವಡಿಸಿದರೆ ಶಾಲೆಯ ಮೈದಾನದಲ್ಲಿ ನಡೆಯುವ ದುಶ್ಚಟಗಳನ್ನು ತಡೆಯುವುದರ ಜೊತೆಗೆ ಕ್ರೀಡಾಂಗಣವು ಬೆಳಕುಮಯವಾಗುತ್ತದೆ. ಅಲ್ಲದೇ ಇದೇ ವಾರ್ಡಿನ ಹಲವು ಕ್ರೀಡಾಪಟುಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೆ ಸಾಧನೆ ಮಾಡಿರುವುದರಿಂದ ಅವರಿಗೂ ಕೂಡ ಕ್ರೀಡಾಭ್ಯಾಸ ಮಾಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ತಾವುಗಳು ತಮ್ಮ ಇಲಾಖೆಯಿಂದ ಕೇಂದ್ರ ಶಾಲೆಯ ಮೈದಾನಕ್ಕೆ ಕೂಡಲೇ ವಿದ್ಯುತ್ ದೀಪಗಳನ್ನು ಅಳವಡಿಸಿಕೊಡಬೇಕೆಂದು 3 ನೇ ವಾರ್ಡಿನ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ರವರಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ 3 ನೇ ವಾರ್ಡಿನ ಸಾರ್ವಜನಿಕರು ಇದ್ದರು.
Tags
ಜಿಲ್ಲಾ ಸುದ್ದಿಗಳು