ಶಾಸಕರಿಂದ ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಜನವರಿ 23 : ಪಟ್ಟಣದ ಪರಾಪೂರ ರಸ್ತೆಯಲ್ಲಿನ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕಿಯರ ನೂತನ ವಸತಿ ನಿಲಯ ಕಟ್ಟಡವನ್ನು ಶಾಸಕ ಆರ್.ಬಸನಗೌಡ ತುರುವಿಹಾಳ ರವರು ಭಾನುವಾರ ಉದ್ಘಾಟನೆ ಮಾಡಿದರು.
ಪರಾಪೂರ ರಸ್ತೆ ಬಳಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ನೂತನ ವಸತಿ ನಿಲಯ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದ್ದು ಈ ವಸತಿ ನಿಲಯವು 75 ವಿದ್ಯಾರ್ಥಿನಿಯರಿಗೆ ಮಂಜೂರಾದ ಕಟ್ಟಡವಾಗಿದ್ದು, ಕ್ಯಾಶುಟೆಕ್ ಎಂಬ ಏಜೆನ್ಸಿ ಬಿಲ್ಡಿಂಗ್ ಸೆಂಟರ್ ಶಕ್ತಿನಗರ ರಾಯಚೂರು ವತಿಯಿಂದ 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯವನ್ನು ಭಾನುವಾರ ಶರಣೇಗೌಡ ಬಯ್ಯಾಪುರ ವಿಧಾನ ಪರಿಷತ್ ಸದಸ್ಯರು ಹಾಗೂ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮತ್ತು ತಾಲೂಕಿನ ಅಧಿಕಾರಿಗಳ ಸಮ್ಮುಖದಲ್ಲಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರುವಿಹಾಳ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ 

ಸಿದ್ದಣ್ಣ ಹೂವಿನ ಭಾವಿ,ಮಲ್ಲಯ್ಯ ಬಳ್ಳಾ, ನಾರಾಯಣಪ್ಪ,ಮಲ್ಲಯ್ಯ ಮುರಾರಿ, ರವಿ ದೇಸಾಯಿ ಅಧ್ಯಕ್ಷರು ಗ್ರಾ.ಪಂ ಹಾಲಾಪುರ, ಆನಂದ ಕುಮಾರ್, ಬಸವರಾಜ್ ಕೊಠಾರಿ ಮಸ್ಕಿ,ಸಿದ್ದು ಮುರಾರಿ, ಮಲ್ಲಿಕ್ ಮುರಾರಿ, ರಾಜೇಂದ್ರ ಕುಮಾರ್ ಸಮಾಜ ಕಲ್ಯಾಣ ಅಧಿಕಾರಿ ಲಿಂಗಸ್ಗೂರು,ಮಂಜುಳಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಲಿಂಗಸ್ಗೂರು,ರವಿ ಕುಮಾರ್ ನಿಲಯ ಪಾಲಕರು, ಸೇರಿದಂತೆ ಇನ್ನಿತರೇ ಅಧಿಕಾರಿ ವರ್ಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.






Post a Comment

Previous Post Next Post