UDAYAVANI NEWS
ಸಕಲೇಶಪುರ,ಜನವರಿ 23 : ಬೆಂಗಳೂರು ಉಪ ವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಸಕಲೇಶಪುರ ಪತ್ರಕರ್ತರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಬೆಂಗಳೂರಿನ ಎಸಿ ಪ್ರತೀಕ್ ಬಯಾಲ್ ಸಕಲೇಶಪುರ ಎಸಿ ಕಛೇರಿಯಲ್ಲಿ ಸಿಬ್ಬಂದಿ ನಿರ್ಮಲಾ ಹಾಗು ಎಸಿ ಡ್ರೈವರ್ ಮನೋಜ್ ಜೊತೆ ಬಂದು ಎಸಿ ಕಛೇರಿಗೆ ಬಂದು ಕಛೇರಿ ಬೀಗ ತೆರೆದು ಹಲವು ಕಡತಗಳನ್ನು ಹೊತ್ತೊಯ್ಯುದ ವಿಷಯ ಗ್ರಾಮದ ನಾಗರೀಕರು ಪತ್ರಕರ್ತರು ಗಳಿಗೆ ತಿಳಿಸಿದ ಕಾರಣಕ್ಕಾಗಿ ಪ್ರೆಸ್ ಕ್ಲಬ್ ಕೌನ್ಸಿಲ್ ಉಪಾಧ್ಯಕ್ಷ ಸಗೀರ್ ಅಹಮದ್ ಈಗಿನ ಎಸಿ ಅನ್ಮೂಲ್ ಜೈನ್ ಅವರಿಗೆ ಭಾನುವಾರ ನೀವಿಲ್ಲದ ಸಮಯದಲ್ಲಿ ಹಳೇ ಎಸಿ ಪ್ರತೀಕ್ ಬಯಾಲ್ . ಕಛೇರಿಗೆ ಬಂದು ಸಿಬ್ಬಂದಿ ಮತ್ತು ಡ್ರೈವರ್ ಜೊತೆ ಬಂದು ಕಛೇರಿ ಬಾಗಿಲು ತೆಗೆದು ಕಡತ ತೆಗೆದುಕೊಂಡು ಹೋಗಿರುವ ವಿಷಯ ಕೇಳಿದಾಗ ನನಗೆ ಏನೂ ಗೊತ್ತಿಲ್ಲ. ಕಛೇರಿ ಬಾಗಿಲು ತೆರೆದ ವಿಷಯ ಗೊತ್ತಿಲ್ಲ. ಡ್ರೈವರ್ ಕೇಳಿ ವಿಷಯ ತಿಳಿಯುವುದಾಗಿ ಹೇಳಿದರು.
ನಂತರ ಸ್ವಲ್ಪ ಹೊತ್ತು ಬಿಟ್ಟು ಪ್ರೆಸ್ ಕ್ಲಬ್ ಕೌನ್ಸಿಲ್ ಉಪಾಧ್ಯಕ್ಷ ಸಗೀರ್ ಅಹಮದ್ ಅವರಿಗೆ ಕಾಲ್ ಮಾಡಿ ಮನೆ ಹತ್ತರ ಬರಲು ಹೇಳಿದರು. ಪ್ರೆಸ್ ಕ್ಲಬ್ ಕೌನ್ಸಿಲ್ ಪತ್ರಕರ್ತರು ಎಸಿ ಮನೆ ಹತ್ತಿರ ಹೋದಾಗ ಬೆಂಗಳೂರು ಎಸಿ ಪ್ರತೀಕ್ ಬಯಾಲ್ ಏಕಾಏಕಿ ನಿಮಗೆ ಕಂಪ್ಲೀಟ್ ಕೊಟ್ಟವರು ಯಾರು ಕಂಪ್ಲೀಟ್ ತೋರಿಸಿ. ಎನ್ನುತ್ತಾ ಏಕವಚನದಲ್ಲಿ ಪತ್ರಕರ್ತರಾದ ನಮಗೆ ಜಾರೇ... ಜಾರೇ.....ಎಂದು ರೌಡಿ ರೀತಿಯಲ್ಲಿ ಕೈ ತೋಳು ಮಡಿಸಿಕೊಂಡು ಸೊಂಟದ ಮೇಲೆ ಎರಡೂ ಕೈ ಇಟ್ಟು ರೌಡಿರೀತಿ ವರ್ತಿಸಿದರಿಂದ ಬೆಸತ್ತು. ಈಗಿನ ಎಸಿ ಅನ್ಮೂಲ್ ಜೈನ್ ರವರನ್ನು ಮನೆಗೆ ಕರೆಸಿ ಹಳೆ ಎಸಿ ಯಿಂದ ಬೆದರಿಕೆ ಹಾಕಿಸುತ್ತಿದ್ದೀರಲ್ಲಾ ಎಂದು ಕೇಳಿದಕ್ಕೆ ಏನೂ ಉತ್ತರ ನೀಡದೇ ಮನೆ ಒಳಗೆ ಹೋದರು.
ಈ ವಿಷಯ ಜಿಲ್ಲಾದಿಕಾರಿಗಳಿಗೆ ಪೋನ್ ಮೂಲಕ ತಿಳಿಸಿದಾಗ ವಿಚಾರಣೆ ಮಾಡುವುದಾಗಿ ಡಿಸಿ ಅರ್ಚನಾ ಹೇಳಿದರು.
ಇದರಿಂದ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿ ಆಡಳಿತ ಯಂತ್ರ ಅದೋಗತಿಗೆ ಇಳಿಯಲಿದೆ. ಸರ್ಕಾರಿ ದಾಖಲೆ ರಕ್ಷಣೆ ಪ್ರತಿಯೊಬ್ಬರ ಅಧಿಕಾರಿಯ ಕರ್ತವ್ಯ ಎಂದು ಸಕಲೇಶಪುರ ಪ್ರೆಸ್ ಕ್ಲಬ್ ಕೌನ್ಸಿಲ್ ಸರ್ಕಾರಕ್ಕೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ತಾ!! ಅಧ್ಯಕ್ಷ ಟಿ ಪಿ. ಕೃಷ್ಣನ್. ಸಹ ಕಾರ್ಯದರ್ಶಿ ಫರ್ಹಾನ್ ಶೇಖ್. ಉಮೇಶ್ ಮತ್ತು ನಾಗರೀಕರು ಸ್ಥಳದಲ್ಲಿ ಇದ್ದರು.
Tags
ಜಿಲ್ಲಾ ಸುದ್ದಿಗಳು